ಸಾಲದಭಾಧೆ ಮುಖ್ಯಪೇದೆ ಆತ್ಮಹತ್ಯೆ

ಬೆಂಗಳೂರು,ನ.೯- ಡೆತ್ ನೋಟ್ ಬರೆದಿಟ್ಟು ಸಶಸ್ತ್ರ ಪಡೆಯ ಮುಖ್ಯಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ.
ಸಿಎಆರ್ ಪಶ್ಚಿಮ ವಿಭಾಗದ ಸಶಸ್ತ್ರ ಪಡೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ (೩೮) ಆತ್ಮಹತ್ಯೆಗೆ ಶರಣಾದವರು.
ಅತಿಯಾದ ಸಾಲದಿಂದ ಮನನೊಂದು ಇಂದು ದುಬಾಸಿಪಾಳ್ಯದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.