ಸಾರ್ವತ್ರಿಕ ವಿಧಾನಸಭಾ ಚುನಾವಣೆ2ನೇ ಹಂತದ ತರಬೇತಿಗೆ ಮತಗಟ್ಟೆ ಸಿಬ್ಬಂದಿಗಳಿಗೆ ವಾಹನ ವ್ಯವಸ್ಥೆ

ವಿಜಯಪುರ:ಎ.26: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಗಳಿಗೆ ಆಯಾ ಮತಕ್ಷೇತ್ರಗಳಲ್ಲಿ 2ನೇ ಹಂತದ ತರಬೇತಿಯನ್ನು ದಿನಾಂಕ : 02-05-2023ರಂದು ಆಯೋಜಿಸಲಾಗಿದ್ದು, ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಅನುಕೂಲವಾಗಲು ತರಬೇತಿ ಕೇಂದ್ರಗಳಿಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

ಜಿಲ್ಲೆಯ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮುದ್ದೇಬಿಹಾಳದ ಎಂ.ಜಿ.ವ್ಹಿ.ಸಿ. ಕಾಲೇಜ್, 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ದೇವರÀಹಿಪ್ಪರಗಿಯ ಎ.ಬಿ.ಸನ್ನಕ್ಕಿ ಪಿ.ಯು.ಕಾಲೇಜ್, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಬಸವನಬಾಗೇವಾಡಿಯ ಶ್ರೀ ಬಸವೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ, 29-ಬಬಲೇಶ್ವರ ಮತಕ್ಷೇತ್ರದಲ್ಲಿ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್ 30-ವಿಜಯಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದ ಸಿಬ್ಬಂದಿಗಳಿಗೆ ವಿಜಯಪುರ ನಗರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಡಶಾಲೆಯಲ್ಲಿ, 32-ಇಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ 33-ಸಿಂದಗಿ ಮತಕ್ಷೇತ್ರದ ಸಿಬ್ಬಂದಿಗಳಿಗೆ ಸಿಂದಗಿಯ ಆರ್.ಡಿ.ಪಾಟೀಲ ಮತ್ತು ಪಿ.ಬಿ.ಪೋರವಾಲ್ ಕಾಲೇಜ್‍ನಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.

ನಿಯೋಜಿತ ಸಿಬ್ಬಂದಿಗಳು ತಾಲೂಕಿನ ತರಬೇತಿ ಕೇಂದ್ರಕ್ಕೆ ತೆರಳಲು ದಿನಾಂಕ : 02-05-2023ರಂದು ಬೆಳಿಗ್ಗೆ 6 ಗಂಟೆಯಿಂದ 7-30 ಗಂಟೆಯೊಳಗೆ ನಿಗದಿಪಡಿಸಿದ ಸ್ಥಳಕ್ಕೆ ಮುಂಚಿತವಾಗಿ ಹಾಜರಿದ್ದು, ತೆರಳಬೇಕಾಗಿರುವ ತಾಲೂಕಿನ ತರಬೇತಿ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಪ್ರತಿಯೊಂದು ಬಸ್ಸಿಗೆ ಫಲಕವನ್ನು ಅಳವಡಿಸಲಾಗಿದೆ. ಬಸ್ಸಿನಲ್ಲಿ ಕುಳಿತು ನಿಯೋಜಿತ ತಾಲೂಕಿಗೆ ತೆರಳಬಹುದಾಗಿದೆ. ಮತಗಟ್ಟೆ ಸಿಬ್ಬಂದಿಗಳು ಆಯಾ ಮತಕ್ಷೇತ್ರಗಳ ತರಬೇತಿ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ನೊಡಿಕೊಳ್ಳಲು ಪ್ರತಿಯೊಂದು ತಾಲೂಕಿನಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ನಿಗದಿಪಡಿಸಿದ ಸ್ಥಳಕ್ಕೆ ಹಾಜರಾಗಿ ಹಂಚಿಕೆ ಮಾಡಲಾದ ಮತಕ್ಷೇತ್ರಗಳ ತರಬೇತಿ ಕೇಂದ್ರಗಳಿಗೆ ತೆರಳುವಂತೆ ಕಲ್ಪಿಸಿರುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮತಗಟ್ಟೆ ಅಧಿಕಾರಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.