ಧಾರವಾಡ, ಮಾ.30: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿ, ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಕಚೇರಿ ಸಭಾಂಗಣದಲ್ಲಿ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಪ್ರೀಲ್ 13 ರಂದು ಜಿಲ್ಲೆಯ ಏಳು ವಿಧಾನ ಸಭಾ ಮತ ಕ್ಷೇತ್ರಗಳಿಗೆ ಚುನಾವಣೆ ಜರುಗಿಸಲು ಅಧಿಸೂಚನೆ ಹೊರಡಿಸಲಾಗುತ್ತದೆ. ಎಪ್ರೀಲ್ 20ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಯು ಎಪ್ರೀಲ್ 21 ರಂದು ನಡೆಯಲಿದೆ. ಎಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮತ್ತು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟದಲ್ಲಿ ಮತ ಏಣಿಕೆ ಜರುಗಲಿದೆ. ಒಟ್ಟಾರೆ ಮೇ 15 ರಂದು ಎಲ್ಲ ಚುನಾವಣಾ ಪ್ರಕ್ರೀಯೆಗಳು ಮುಕ್ತಾಯವಾಗಲಿವೆ ಎಂದು ಅವರು ಹೇಳಿದರು.
ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ ಏಳು ವಿಧಾನಸಭಾ ಮತಕ್ಷೇತ್ರಗಳಿದ್ದು, ಒಟ್ಟು ಪುರುಷ 7,57,522, ಮಹಿಳಾ 7,49,807 ಹಾಗೂ ಇತರೆ 85 ಸೇರಿದಂತೆ ಒಟ್ಟು 15,07,414 ಮತದಾರರಿದ್ದಾರೆ.
ನವಲಗುಂದ ವಿಧಾನಸಭಾ ಮತ ಕ್ಷೇತ್ರ-69 : ಪುರುಷರು-1,03,964, ಮಹಿಳೆಯರು-1,01,407, ಇತರೆ-6. ಒಟ್ಟು ಮತದಾರರು- 2,05,377
ಕುಂದಗೋಳ ವಿಧಾನಸಭಾ ಮತ ಕ್ಷೇತ್ರ-70: ಪುರುಷರು – 95,015. ಮಹಿಳೆಯರು-89,927. ಇತರೆ-7. ಒಟ್ಟು ಮತದಾರರು-1,84,949
ಧಾರವಾಡ ವಿಧಾನಸಭಾ ಮತ ಕ್ಷೇತ್ರ-71: ಪುರುಷರು-1,06,190. ಮಹಿಳೆಯರು-1,05,142. ಇತರೆ-9. ಒಟ್ಟು ಮತದಾರರು- 2,11,341
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತ ಕ್ಷೇತ್ರ-72: ಪುರುಷರು-1,03,226. ಮಹಿಳೆಯರು-1,04,199. ಇತರೆ-14. ಒಟ್ಟು ಮತದಾರರು-2,07,439
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತ ಕ್ಷೇತ್ರ 73: ಪುರುಷರು-1,21,872. ಮಹಿಳೆಯರು-1,23,952. ಇತರೆ – 38. ಒಟ್ಟು ಮತದಾರರು-2,45,862
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತ ಕ್ಷೇತ್ರ-74: ಪುರುಷರು-1,28,085. ಮಹಿಳೆಯರು-1,31,736. ಇತರೆ-4. ಒಟ್ಟು ಮತದಾರರು-2,59,825
ಕಲಘಟಗಿ ವಿಧಾನಸಭಾ ಮತ ಕ್ಷೇತ್ರ-75= ಪುರುಷರು-99170. ಮಹಿಳೆಯರು-93444. ಇತರೆ-7. ಒಟ್ಟು ಮತದಾರರು -1,92,621 ಇದ್ದಾರೆ.
ಮತಗಟ್ಟೆಗಳ ಸಂಖ್ಯೆ: ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ 944, ಗ್ರಾಮೀಣ ಪ್ರದೇಶಲ್ಲಿ 692 ಸೇರಿದಂತೆ ಒಟ್ಟು 1,636 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ 216 ಸೂಕ್ಷ್ಮ ಮತಗಟೆಗಳನ್ನು ಮತ್ತು 162 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನದ ದಿನದಂದು ವಿಡಿಯೋಗ್ರಾಫಿ, ವೆಬ್‍ಕ್ಯಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯಮಾನುಸಾರ ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಏಳು ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ:
ನವಲಗುಂದ ವಿಧಾನಸಭಾ ಮತಕ್ಷೇತ್ರ-69: ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ನವಲಗುಂದ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ವಿಶೇಷ ಭೂಸ್ವಾಧಿನ ಅಧಿಕಾರಿ ಎಸ್.ಎಸ್.ಸಂಪಗಾಂವಿ (ಮೋ. 9945810792) ಚುಣಾವಣಾಧಿಕಾರಿಯಾಗಿದ್ದಾರೆ.
ಕುಂದಗೋಳ ವಿಧಾನಸಭಾ ಮತಕ್ಷೇತ್ರ-70: ಕುಂದಗೋಳ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗಾನಾಯ್ಕ (ಮೋ. 9480864001) ಚುಣಾವಣಾಧಿಕಾರಿಯಾಗಿದ್ದಾರೆ.
ಧಾರವಾಡ ವಿಧಾನಸಭಾ ಮತಕ್ಷೇತ್ರ-71: ಧಾರವಾಡ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಉಪವಿಭಾಗಾಧಿಕಾರಿ ಅಶೋಕ ತೇಲಿ (ಮೋ. 8123295366) ಚುಣಾವಣಾಧಿಕಾರಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ-72: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ವಿನೋದ ಹೆಗ್ಗಳಗಿ (ಮೊ.ನಂ:9480415704) ಚುಣಾವಣಾಧಿಕಾರಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ-73: ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ತೆರೆಯಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ.ಬಿ., (ಮೊ.ನಂ:9731008189) ಚುಣಾವಣಾಧಿಕಾರಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ-74: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯಲ್ಲಿ ತೆರೆಯಲಾಗಿದ್ದು, ಎನ್‍ಡಬ್ಲೂಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಭರತ ಎಸ್. (ಮೊ.ನಂ:7760991999) ಚುಣಾವಣಾಧಿಕಾರಿಯಾಗಿದ್ದಾರೆ.
ಕಲಘಟಗಿ ವಿಧಾನಸಭಾ ಮತಕ್ಷೇತ್ರ-75: ಕಲಘಟಗಿ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಶ್ರವಣ ನಾಯ್ಕ (ಮೊ.ನಂ:9606457902) ಚುಣಾವಣಾಧಿಕಾರಿಯಾಗಿದ್ದಾರೆ.
ಮಾದರಿ ನೀತಿ ಸಂಹಿತೆ ಕುರಿತು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು:
- ಸಾರ್ವಜನಿಕ ಅನುದಾನದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕುರಿತು ಹಾಗೂ ವಿವಿಧ ಚಟುವಟಿಕೆಗಳನ್ನು ಕೈಗೊಂಡಿರುವ ಕುರಿತು ಅಳವಡಿಸಲಾದ ಜಾಹೀರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವುದು.
- ಕಚೇರಿ ವೆಬ್‍ಸೈಟ್‍ನಲ್ಲಿನ ಎಲ್ಲ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ಮತ್ತು ರಾಜಕೀಯ ಕಾರ್ಯ ಚಟುವಟಿಕೆ ತೋರುವಂತಹ ಜಾಹೀರಾತು, ಮಾಹಿತಿಯನ್ನು ತೆಗೆದು ಹಾಕಲು ತಕ್ಷಣವೇ ತೆಗೆದು ಹಾಕುವುದು.
- ಈಗಾಗಲೇ ನಿಯೋಜನೆಗೊಂಡಿರುವ ಮಾದರಿ ನೀತಿ ಸಂಹಿತೆ ಹಾಗೂ ವೆಚ್ಚ ಪರಿಶೀಲನೆಗೆ ಸಂಬಂಧಿಸಿದಂತೆ ರಚಿಸಲಾದ ವಿವಿಧ ತಂಡಗಳು ತಕ್ಷಣವೇ ಕಾರ್ಯ ಪ್ರಾರಂಭಿಸಲು ಸೂಚಿಸಲಾಗಿದೆ. ಎಸ್.ಎಸ್.ಟಿ-24 ಚೆಕ್‍ಪೋಸ್ಟ್‍ಗಳು, ಎಫ್.ಎಸ್.ಟಿ-21 ತಂಡಗಳು, ವಿ.ಎಸ್.ಟಿ-21 ತಂಡಗಳು ವಿ.ವಿ.ಟಿ-21 ತಂಡಗಳು, ಎ.ಟಿ-7 ತಂಡಗಳನ್ನು ರಚಿಸಲಾಗಿದೆ.
- ಸರ್ಕಾರಿ, ಸಾರ್ವಜನಿಕ, ಖಾಸಗಿ ಸ್ವತ್ತುಗಳ ಮೇಲೆ ರಾಜಕೀಯ ಪಕ್ಷಗಳ ಪ್ರಚಾರ ಕುರಿತಾದ ಪೋಸ್ಟರ್ ಗಳನ್ನು ತಕ್ಷಣವೇ ತೆರವುಗೊಳಿಸುವುದು.
- ಎಲ್ಲ ನಾಮನಿರ್ದೇಶಿತ ಮತ್ತು ರಾಜಕೀಯ ವ್ಯಕ್ತಿಗಳಿಗೆ ನೀಡಿದ ವಾಹನಗಳನ್ನು ತಕ್ಷಣ ಹಿಂಪಡೆಯುವುದು.
- ಚುನಾವಣಾ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ಸ್ವೀಕೃತವಾಗುವ ದೂರುಗಳ ನಿರ್ವಹಣೆ ಕುರಿತು ವಿಧಾನಸಭಾ ಕ್ಷೇತ್ರವಾರು 24*7 ಮಾದರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
- ಸಹಾಯವಾಣಿ 1950 ಮತ್ತು ಸಿ-ವಿಜಿಲ್ ತಂತ್ರಾಂಶದ ಮುಖಾಂತರ ಚುನಾವಣಾ ಸಂಬಂಧಿ ದೂರು ಸಲ್ಲಿಸಿದಲ್ಲಿ ತಕ್ಷಣವೇ ಕ್ರಮವಹಿಸಲಾಗುವುದು.
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರನ್ನು ಎಂ.ಸಿ.ಎಂ.ಸಿ ತಂಡದ ಕಾರ್ಯವನ್ನು ನಿರ್ವಹಿಸಲು ನೇಮಿಸಿದ್ದು, ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಈಗಾಗಲೇ ನಿಯೋಜನೆಗೊಂಡಿರುವ ಕಂಟ್ರೋಲ್ ರೂಂ. ತಂಡದವರು ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
- ರಾಜಕೀಯ ಉದ್ದೇಶಕ್ಕಾಗಿ ಧಾರ್ಮಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೊಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ ಮಂಜುಳಾ ನಾಯಕ, ಶಿರಸ್ತೆದಾರ ಸುನೀಲ ಚೌಡನ್ನವರ ಉಪಸ್ಥಿತರಿದ್ದರು.