ಸಾರ್ವತ್ರಿಕ ಚುನಾವಣೆಗೆ ವಿಜಯನಗರ ಜಿಲ್ಲಾಡಳಿತ ಸಿದ್ಧ: ಸಕಲವೂ ಸಿದ್ಧ.


ಸಂಜೆವಾಣಿ ವಾರ್ತೆ
ಹೊಸಪೇಟೆ: ಮೇ 10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ನೂತನ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದಲ್ಲಿಒಟ್ಟು 1219 ಮತಗಟ್ಟೆ ಹಾಗೂ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿದೆ
ಎಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ಮತದಾನ ನಡೆಯಲಿದೆ ಎಂದರು. ಜಾಬ್ ಕಾರ್ಡ್ ಸೇರಿದಂತೆ ಭಾವಚಿತ್ರ ಇರುವ ಬ್ಯಾಂಕ್ ಹಾಗೂ ಸರ್ಕಾರಿ ಗುರುತಿನಪತ್ರ ಮತದಾರರ ಚೀಟಿ, ತೋರಿಸಿ ಮತದಾನ ಮಾಡಬಹುದಾಗಿದೆ.ಹೊಸಪೇಟೆಯ ಪ್ರೌಡ ದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಏಣಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಹಡಗಲಿಯಲ್ಲಿ 191270 , ಹಗರಿಬೊಮ್ಮನಹಳ್ಳಿ
229987, ವಿಜಯನಗರ 249956, ಕೂಡ್ಲಿಗಿ 203753 ಹಾಗೂ ಹರಪನಹಳ್ಳಿಯಲ್ಲಿ 217045 ಮತದಾರರಿದ್ದು ಒಟ್ಟು 1092011ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದರು. ಜಿಲ್ಲೆಯಲ್ಲಿ 25 ವಿಶೇಷ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದರು.
ಚುನಾವಣಾ ಸಂದರ್ಭದಲ್ಲಿ 5.5 ಕೋಟಿ (ನಗದು, ಲಿಕ್ಕರ್ ಹಾಗೂ ಗೃಹಬಳಕೆಯ ವಸ್ತುಗಳ) ವಶಪಡಿಸಿಕೊಳ್ಳಲಾಗಿದೆ ಎಂದರು. ಕೇಂದ್ರ ಮೀಸಲು ಪಡೆಯ14 ಬಟಾಲಿಯನ್, 1884 ನಾಗರಿಕ ಪೊಲೀಸ್, 5ಕೆಎಸ್ಆರ್ಪಿ ತುಕುಡಿಗಳನ್ನು ರಕ್ಷಣೆಗೆ ಹಾಗೂ ಜಿಲ್ಲೆಯಾದ್ಯಂತ 9 ಸಾವಿರ ಸಿಬ್ಬಂದಿ ಚುನಾವಣಾ  ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾಪಂಚಾಯಿತ ಮುಖ್ಯ ಕಾರ್ಯಾನಿವಹಣಾಧಿಕಾರಿ ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಅನುರಾಧ  ಹಾಜರಿದ್ದರು