ಸಾರ್ವಜನಿಕ ಹೋಳಿ ಹಬ್ಬ ಆಚರಣೆಗೆ ಅವಕಾಶ ಇಲ್ಲ

ಕಲಬುರಗಿ,ಮಾ.25:ಈಗಾಗಲೇ ಕಲಬುರಗಿ, ಬೀದರ ಮತ್ತು ಬೆಂಗಳೂರು ನಗರಗಳನ್ನು ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿರುವ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬರುವ 28 ಮತ್ತು 30ರಂದು ಆಚರಿಸುವ ಹೋಳಿ ಹಬ್ಬವು ಸಾರ್ವಜನಿಕವಾಗಿ ಆಚರಣೆ ಮಾಡದಿರಲು ಈಗಾಗಲೇ ಸರಕಾರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ ಧಾರ್ಮಿಕ ಹಬ್ಬಗಳಾದ ಉಗಾದಿ, ಹೋಲಿ, ಶಾಬ್-ಎ-ಬರಾತ್, ಗುಡ್ ಫ್ರೈಡೆ ಇತ್ಯಾದಿಗಳಲ್ಲಿ ಸಾರ್ವಜನಿಕವಾಗಿ ಆಚರಿಸಲು ನಿಷೇದಿಸಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಜಾರಿ ಮಾಡಿದ್ದಾರೆ.