ಮಾನ್ವಿ,ಮಾ.೩೧- ತಾಲೂಕಿನ ಸಾರ್ವಜನಿಕರಿಗೆ ಉಚ್ಛನ್ಯಾಯಾಲಯ ಕರ್ನಾಟಕ ಇವರ ರೀಟ್ ಅರ್ಜಿ ಸಂಖ್ಯೆ: ೧೫೧೬೫/೨೦೧೮ ಮತ್ತು ಸಿಸಿಸಿ ಸಂಖ್ಯೆ: ೩೪೩/೨೦೨೦ರಲ್ಲಿ ಹೊರಡಿಸಲಾಗಿರುವ ಆದೇಶ ಹಾಗೂ ಕರ್ನಾಟಕ ಸರ್ಕಾರವು ದಿನಾಂಕ: ೧೬-೦೭-೨೦೦೯ ರಂದು ಹೊರಡಿಸಿದ ಆದೇಶದ ಪ್ರಕಾರ ಪ್ರತಿ ಗ್ರಾಮದ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ನಿಮ್ಮ- ನಿಮ್ಮ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದಿರುವ ಬಗ್ಗೆ ಗ್ರಾಮ ಆಡಳಿತಾಧಿಕಾರಿ/ಕಂದಾಯ ನಿರೀಕ್ಷಕ/ ತಹಶೀಲ್ದಾರರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು, ಹಾಗೂ ಯಾವ ವ್ಯಕ್ತಿಯು ಲಿಖಿತವಾಗಿ ತಿಳಿಸುತ್ತಾನೋ, ಆತನ ಹೆಸರು, ತಂದೆಯ ಹೆಸರು, ಆಧಾರ ಸಂಖ್ಯೆ, ಗ್ರಾಮ/ಪಟ್ಟಣ/ಶಹರ/ತಾಲೂಕು/ ಜಿಲ್ಲಾ ನಮೂದಿಸಿ, ಅರ್ಜಿಯನ್ನು ಸಲ್ಲಿಸಲು ಸಾರ್ವಜನಿಕರಿಗೆ ಮಾನವಿ ತಹಶೀಲ್ದಾರ ಚಂದ್ರಕಾಂತ ಎಲ್ ಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.