ಸಾರ್ವಜನಿಕ ಸ್ಥಳಗಳಲ್ಲಿ ತಂಪು ಕುಡಿಯುವ ನೀರಿಗೆ ಮನವಿ

ಕಲಬುರಗಿ.ಮೇ 8: ನಗರದ ರಸ್ತೆ ಮೇಲೆ ನೀರು ಸಿಂಪಡಿಸಲು, ಪ್ರಮುಖ ವೃತ್ತಗಳಲ್ಲಿ ಹಾಗೂ ಸಾರ್ವಜನಿಕರು ನಿಲುಗಡೆ ಸ್ಥಳ,ಬಸ್ ನಿಲ್ದಾಣದಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಜನರ ಹಿತವನ್ನು ಕಾಪಾಡಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟವತಿಯಿಂದ ಜಿಲ್ಲಾಧಿಕಾರಿಗಳಗೆ ಮನವಿ ಸಲ್ಲಿಸಲಾಯಿತು
ಬೀದರ,ಕಲಬುರಗಿ, ಯಾದಗಿರಿ,ರಾಯಚೂರ,ಕೊಪ್ಪಳ,ಬಳ್ಳಾರಿ ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಬಿಸಿಲು ದಾಖಲೆಯಾಗುತ್ತಿರುವುದು ಅದರಲ್ಲೂ ಕಲಬುರಗಿಯಲ್ಲಿ ಜನರು ಓಡಾಟ ಮಾಡಲು ಕೂಡಾ ತುಂಬಾ ತೊಂದರೆಯಾಗುತ್ತದೆ. ಅನೇಕ ಸಿಗ್ನಲ್ ಬಳಿ 44 ಡಿಸೆ ತಾಪಮಾನದಿಂದ ವಾಹನ ಸವಾರರ ಮೇಲೆ ತುಂಬಾ ಪರಿಣಾಮವಾಗುತ್ತಿದೆ.ಅದಕ್ಕಾಗಿ ಕೆಲವು ದಿನಗಳ ಕಾಲ ಸಿಗ್ನಲ್‍ಗಳು ಕಾರ್ಯವನ್ನು ಸ್ಥಗಿತಗೊಳಿಸಿ,ಅಲ್ಲದೆ ಕಲಬುರಗಿ ನಗರದ ರಸ್ತೆಗಳ ಮೇಲೆ ನೀರು ಸಿಂಪಡಿಸುವ ಕಾರ್ಯಕ್ಕೆ ಮಹಾ ನಗರ ಪಾಲಿಕೆ ಮುಂದಾಗಲು ಸೂಚಿಸುವಂತೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಚೀನ ಫರಹತಾಬಾದ,ಮಂಜುನಾಥ ನಾಲವಾರಕರ್, ಗೋಪಾಲ ನಾಟೀಕಾರ, ದತ್ತು ಭಾಸಗಿ,ಶರಣು ಹೋಸಮನಿ,ಜಯರಾಜ ಕಿಣಗೀಕರ್ ಇನ್ನಿತರು ಉಪಸ್ಥಿತರಿದ್ದರು,