ಸಾರ್ವಜನಿಕ ಸಮಸ್ಯೆ ಸ್ಪಂದಿಸಲು ಸಹಾಯವಾಣಿ ಆರಂಭ ಬರ ನಿರ್ವಹಣೆ -ನೀರಿನ ಕೊರತೆ ನೀಗಿಸಲು ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಕಲಬರಗಿ:ಮಾ.06:2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಪ್ರಯುಕ್ತ ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಸಕಲ ಸಿದ್ಥತೆಯನ್ನು ಮಾಡಿಕೊಂಡಿದ್ದು, ಜಿಲ್ಲಾ ಎಲ್ಲಾ ತಾಲೂಕು ಮತ್ತು ನಗರ ಪ್ರದೇಶದಲ್ಲಿ ನೀರಿನ ಅಭಾವ ಆಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಬುಧುವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬರಪೀಡಿತ ತಾಲ್ಲೂಕುಗಲ್ಲಿ ಮಳೆ ಅಭಾವದಿಂದ ಒಟ್ಟು, 276368 ಹೇ. ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದು ಕುರಿತು NDRF/SDRF ಮಾರ್ಗಸೂಚಿನ್ವಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಅರ್ಹ ಫಲಾನುಭವಿ ರೈತರಿಗೆ ಎಸ್.ಡಿ.ಆರ್.ಎಫ್ ಅನುದಾನದಲ್ಲಿ (ಕನಿಷ್ಠ ರೂ.1000/- ಯಿಂದ ಗರಿಷ್ಠ ರೂ.2000/- ರಂತೆ) ನೀಡಲಾಗಿದೆ ಎಂದರು.
ಒಟ್ಟು. 2,64,417 ರೈತರಿಗೆ ರೂ. 52.53 ಕೋಟಿ ಪರಿಹಾರ ಧನ ಡಿಬಿಟಿ ಮುಖಾಂತರ ರೈತರ ಬ್ಯಾಮಖ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ದಿ: 06.11.2023ರನ್ವಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ಒಟ್ಟು 42 ಬರಗಾಲ ನಿರ್ವಾಹಣೆಗಾಗಿ ತಗೆದುಕೊಳ್ಳಲುವ ಮುಂಜಾಗ್ರತ ಕ್ರಮಗಳ ಕುರಿತು ಚರ್ಚಿಸಲು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ತಾಲ್ಲೂಕು ಟಾಸ್ಕ್ ಪೆÇೀರ್ಸ್ ಸಭೆಗಳನ್ನು ನಡೆಸಲಾಗಿದೆ ಎಂದರು.
ಪಶು ಸಂಗೋಪನೆ ಇಲಾಖೆ ಕಲಬುರಗಿ ಇವರ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 458756 (ದನ ಹಾಗೂ ಎಮ್ಮೆಗಳು) ಮತ್ತು 558587 ಕುರಿ ಮತ್ತು ಮೇಕೆಗಳಿರುತ್ತವೆ. ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ 644093 ಮೆಟ್ರಿಕ ಟನ್ ಮೇವು ಲಭ್ಯವಿದ್ದು ಇದನ್ನು 30 ವಾರಗಳವರೆಗೆ ಉಪಯೋಗಿಸಬಹುದಾಗಿದೆ. (2023-24ನೇ ಸಾಲಿನ ರಬಿ ಬೆಳೆಗಳಿಂದ ಉತ್ಪಾದನೆಯಾಗಬಹುದಾದ ಮೇವಿನ (ಜೋಳದ ಮೇವು) ಅಂದಾಜನ್ನು ಪರಿಗಣಿಸಲಾಗಿದೆ). ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೆ ಜಿಲ್ಲೆಗೆ 39,361 ಮೇವಿನ ಬೀಜಗಳ ಮಿನಿಕಿಟ್ಟ ಸರಬರಾಜಾಗಿದ್ದು, ಸದರಿ ಗಳನ್ನು ಒಟ್ಟು 13061 ರೈತರಿಗೆ ವಿತರಿಸಲಾಗಿದೆ.
ಎಲ್ಲಾ ಕೀಟ್ ಬರ ಪರಸ್ಥಿತಿಯ ಹಿನ್ನೆಲೆಯಲ್ಲಿ ಅಂತರ ರಾಜ್ಯ/ಜಿಲ್ಲೆಗಳಿಗೆ ಮೇವು ಸಾಗಾಣಿಕೆಯನ್ನ ನಿರ್ಭಂದಿಸಿ ಆದೇಶಿಸಲಾಗಿದೆ, ಮತ್ತು ಈ ಸಂಬಂಧ 15 ಚೆಕಪೆÇಸ್ಟಗಳನ್ನು ಸ್ಥಾಪಿಸಲಾಗಿದೆ. (ಅಫಜಲಪೂರ-3, ಆಳಂದ-4, ಚಿಂಚೋಳಿ-3 ಮತ್ತು ಸೇಡಂ-5). ಮುಂಜಾಗೃತ ಕ್ರಮವಾಗಿ ಪಶು ಸಂಗೋಪನೆ ಇಲಾಖೆಯಿಂದ ಪ್ರತಿ ಹೊಬಳಿಗೆ 1ರಂತೆ ಒಟ್ಟು 33 ಸ್ಥಳಗಳಲ್ಲಿ ಮೇವಿನ ಬ್ಯಾಂಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. (ಪರಿಸ್ಥಿತಿಯ ಅಗತ್ಯಗನುಗುಣವಾಗಿ). ಬರಗಾಲ ಪರಿಸ್ಥತಿ ಯ ಹಿನ್ನಲೆಯಲ್ಲಿ ಅವಶ್ಯಕತೆ ಅನುಗುಣವಾಗಿ 30 ಸ್ಥಳಗಳಲ್ಲಿ ಜಾನುವಾರು ಗೋ ಶಾಲೆಗಳನ್ನು ಸ್ಥಾಪಿಸಲು ಪಶು ಸಂಗೋಪನೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ. ಎಂದು ವಿವರಿಸಿದರು.
ರೈತರ ಜಾನುವಾರುಗಳಿಗೆ ಮೇವು ಕೊರತೆ ಪ್ರಕರಣ ಕಂಡುಬಂದಲ್ಲಿ ನಿಯಮನುಸಾರ ಅಗತ್ಯ ನೆರವು ನೀಡಿ ರೈತರುಗಳು ಯಾವುದೇ ಕಾರಣಕ್ಕು ಜಾನುವಾರುಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ಪಶು ಸಂಗೋಪನೆ ಇಲಾಖೆಯಿಂದ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಸಿಓ ಭಂವರಸಿಂಗ್ ಮೀನಾ ಅವರು ಮಾತನಾಡಿ, ನೀರಿನ ಕೊರತೆ ಉದ್ಭವಿಸ ಬಹುದಾದ ಗ್ರಾಮಗಳ ವಿವರಗಳನ್ನು ನೂಡುತ್ತ ಜಿಲ್ಲೆಯ 854 ಗ್ರಾಮಗಳ ಪೈಕಿ 315 ಗ್ರಾಮಗಳು ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.ಕಲಬುರಗಿ ತಾಲೂಕಿನಲ್ಲಿ 40 ಗ್ರಾಮಗಳು ಆಳಂದ ತಾಲೂಕಿನ 80 ಗ್ರಾಮಗಳು, ಚಿಂಚೋಳಿ ತಾಲೂಕಿನ 14 ಗ್ರಾಮಗಳು, ಅಫಜಲಪೂರು ತಾಲೂಕಿನ 86 ಗ್ರಾಮಗ ಜೇವರ್ಗಿ ತಾಲೂಕಿನ 5 ಗ್ರಾಮಗಳು, ಚಿತ್ತಾಪೂರದ 14 ಗ್ರಾಮಗಳು, ಶಹಾಬಾದ ತಾಲೂಕಿನ 5 ಗ್ರಾಮಗಳು, ಕಾಳಗಿ ತಾಲೂಕಿನ 16 ಗ್ರಾಮಗಳು, ಯಡ್ರಾಮಿ ತಾಲೂಕಿನ 4 ಗ್ರಾಮಗಳು ಮತ್ತು ಕಮಲಾಪೂರ ತಾಲೂಕಿನ 23 ಗ್ರಾಮಗಳು ಹಾಗೂ ಸೇಡಂ ತಾಲೂಕಿನ 28 ಗ್ರಾಮಗಳು ಬೇಸಿಗೆ ಕಾಲದಲ್ಲಿ ನೀರಿನ ಕೊರ ಉದ್ಭವಿಸುವ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಕಾರ್ಯನಿರ್ವಾಹಕ ಅದಿಕಾರಿಗಳು ಕಲಬುರಗಿ ಇವರು ಅಫಜಲಪೂರ ಹಾಗೂ ಆಳಂದ ತಾಲೂಕಿನ ಕುಡಿಯುವ ನೀರಿನ ತೀವ್ರ ಸಮಸ್ಯೆವಿರುವ ಗ್ರಾಮಗಳಿಗೆ ಬೇಟಿ ನೀಡಿ ಖಾಸಗಿ ಕೋಳವೆ ಬಾವಿ/ತೆರೆದ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜೂ ಮಾಡಲು ಆದೇಶಿಸಿರುತ್ತಾರೆ. ಅದರಂತೆ ಅಫಜಲಪೂರ ತಾಲೂಕಿನಲ್ಲಿ 11 ಮತ್ತು ಆಳಂದ ತಾಲೂಕಿನಲ್ಲಿ 11 ಹಾಗೂ ಕಮಲಾಪೂರ ತಾಲ್ಲೂಕಿನ 7 ಗ್ರಾಮಗಳಿಗೆ ಖಾಸಗಿ ಕೋಳವೆ/ತೆರೆದ ಬಾವಿಗಳಿಂದ ನೀರನ್ನು ಸರಬರಾಜೂ ಮಾಡಲಾಗುತ್ತಿದೆ. ಜಿಲ್ಲಾದಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅದಿಕಾರಿಗಳು ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರರು ಮತ್ತು ಕಾರ್ಯನಿರ್ವಾಹಕ ಇಂಜಿನಿಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅದಿಕಾರಿಗಳೊಂದಿಗೆ ಪ್ರತಿ ವಾರ ಬರಗಾಲ ಸ್ಥಿತಿಗಳ ಬಗ್ಗೆ ಮತ್ತು ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ತಾಲೂಕು ಮಟ್ಟಗಳಲ್ಲಿ ಟಾಸ್ಕ ಫೊರ್ಸ್ ಸಮೀತಿಯನ್ನು ನಿರ್ಮೀಸಲಾಗಿದ್ದು, ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ತಹಸಿಲ್ದಾರ ಮತ್ತು ಕುಡಿಯುವ ನೀರಿಗೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಜಂಟಿ ಪರೀಶೀಲನೆ ಮಾಡಿ ಸಮಸ್ಯೆ ವಿರುವ ಗ್ರಾಮಗಳಿಗೆ ಕುಡಿಯುವ ನೀರಿನ ವವ್ಯಸ್ಥೆ ಮಾಡಲಾಗುತ್ತಿದೆ ಮತ್ತು ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿರವರು ಪ್ರತಿ ವಾರ ಬರಗಾಲ ಸ್ಥಿತಿಗಳ ಬಗ್ಗೆ ಮತ್ತು ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಅಲ್ಲದೇ ಜಿಲ್ಲೆಯಲ್ಲಿ ಒಟ್ಟು 174 ಖಾಸಗಿ ಬೋರ್ ವೆಲ್‍ಗಳನ್ನು ಗುರುತಿಸಿದೆ .ಅಗತ್ಯವಿದ್ದಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಜಿಲ್ಲಾಡಳಿತವು 91 ಟ್ಯಾಂಕರಗಳನ್ನು ಗುರುತಿಸಲಾಗಿದ್ದು, ವಿಭಾಗದಲ್ಲಿ 9000 ಲೀಟರ್ ರ್ಸಾಮಥ್ರ್ಯವುಳ್ಳ 7 ಟ್ಯಾಂಕರ್‍ಗಳಿದ್ದು,ನೀರಿನ ಕೊರತೆ ಕಂಡುಬಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ವಾರ್ಷಿಕ ತಾಪಮಾನವು 30.13 ಆಗಿದೆ. ಕಲಬುರಗಿಯು ಸಾಮಾನ್ಯವಾಗಿ ಸುಮಾರು 104.74 ಮಿಲಿ ಮೀಟರ (4.12 ಇಂಚುಗಳು) ಮಳೆಯನ್ನು ಪಡೆಯುತ್ತದೆ. ಆದರೆ ಈ ವರ್ಷವಾಡಿಕೆಯಂತೆ ಮಳೆ ಆಗದೇಯಿರುವುದರಿಂದ ಸತತ 2001 ರಿಂದ 23 ವರ್ಷಗಳಲ್ಲಿ 16 ವರ್ಷಗಳು ತೀವ್ರ ಬರಪರಿಸ್ಥಿತಿ ಎದುರಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಬೋರ್ ವೇಲ್‍ಗಳ ಅಂಕಿ ಸಂಖ್ಯೆ.ಜಿಲ್ಲೆಯ ಅಫಜಲಪುರದಲ್ಲಿ ಒಟ್ಟು 86 ಹಳ್ಳಿಗಳಲ್ಲಿ 314 ಬೋರ್‍ವೆಲ್‍ಗಳಿದ್ದು, ಅದರಲ್ಲಿ 224 ಬೋರ್‍ವೆಲ್‍ಗಳು ಉಪಯೋ ಗದಲ್ಲಿದ್ದು, 90 ಬೋರ್‍ವೆಲ್‍ಗಳು ಬಳಕೆಗೆ ಬಾರದೆ ಇದ್ದು, 88ಗಳನ್ನು ರಿಪೇರ್ ಮಾಡಲಾಗುತ್ತಿದೆ, ಇದರಲ್ಲಿ 42 ಖಾಸಗಿ ಬೋರ್‍ವೆಲ್‍ಗಳಿವೆ. ಆಳಂದನಲ್ಲಿ 205 ಬೋರ್‍ವೆಲ್‍ಗಳಲ್ಲಿ 121 ಉಪಯೋಗಕ್ಕೆ ಹಾಗೂ 79 ಉಪಯೋಗಕ್ಕೆ ಬಾರದೆ ಇದ್ದು, ಚಿಂಚೋಳಿಯಲ್ಲಿ 54 ಉಪಯೋಗಕ್ಕೆ ಹಾಗೂ 41 ಉಪಯೋಗಕ್ಕೆ ಬಾರದೆ ಇರುವ ಬೋರ್‍ವೆಲ್‍ಗಳಿವೆ. ಹೀಗೆ ಪ್ರತಿ ಹಳ್ಳಿಗಳಲ್ಲಿ ಬೋರ್‍ವೆಲ್‍ಗಳ ಸ್ಥಿತಿಗತಿಗಳನ್ನು ನೋಡಿಕೊಂಡು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಗರಿಗೆ ಸಮಸ್ಯೆಗಳಾಗದಂತೆ ಜಿಲ್ಲಾ ಕೇಂದ್ರದಲ್ಲಿ ಆಪ ಸಹಾಯಕ್ಕೆ 7760009789 ಸಂಖ್ಯೆಯನ್ನು ಆರಂಬಿಸಲಾಗಿದ್ದು, ಇದರೊಂದಿಗೆ ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರ1077ನಲ್ಲಿ ಆರಂಬಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿನ ನೀರಿನ ಕೊರತೆ ನೀಗಿಸಲು ಸಿದ್ಧತೆ:- ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ಪಾಟೀಲ್ ದೇವಿದಾಸ ಅವರು,ಕಲಬುರಗಿ ನಗರಕ್ಕೆ ದಿನನಿತ್ಯಕ್ಕೆ ಸುಮಾರು 108.68 ಎಂಎಲ್ ಡಿ (ಇತರೆ ನಷ್ಟಗಳು ಸೇರಿಕೊಂಡು) ಒಟ್ಟು ಸಗಟು ನೀರಿನ ಅವಶ್ಯಕತೆವಿರುತ್ತದೆ. ಇದರಲ್ಲಿ 80.16 ಎಂಎಲ್‍ಡಿ ಒಟ್ಟು ಸಗಟು ನೀರು ವಿವಿಧ ಮೂಲಗಳಿಂದ ಲಭ್ಯವಿರುತ್ತದೆ. ಲಭ್ಯವಿರುವ ಮೂಲಗಳಾದ ಬೀಮಾ ನದಿಯ ಸರಡಗಿ ಬ್ಯಾರೇಜಿನಿಂದ 52.62 ಎಂಎಲ್ಡಿ ಒಟ್ಟು ಸಗಟು ನೀರನ್ನು ಕೋಟನೂರ ಮತ್ತು ಶೋರಗುಂಬಜ ನೀರಿನ ಶುದ್ಧಿಕರಣ ಘಟಕದಲ್ಲಿ ಶುದ್ಧಿಕರಿಸಿ ಪ್ರತಿದಿನ ಸುಮಾರು 43 ವಾರ್ಡಗಳಿಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಕುರಿಕೋಟಾ ಹತ್ತಿರದ ಬೆಣ್ಣೆ ಕೋರಾ ನದಿಯಿಂದ 22 ಎಂಎಲ್‍ಡಿ ಒಟ್ಟು ಸಗಟು ನೀರನ್ನು ಹಳೇ ಪಿಲ್ಟರ್ ಬೆಡ್ ನಲ್ಲಿಯ ನೀರಿನ ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಿ ಸುಮಾರು 12 ವಾರ್ಡ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿಗಳಿಂದ ಹಾಗೂ ಇತರ ಮೂಲಗಳಿಂದ 8 ಎಂಎಲ್‍ಡಿ ನೀರನ್ನು ನಗರಕ್ಕೆ ಒದಗಿಸಲಾಗುತ್ತಿದೆ. ಈ ವರ್ಷ ಮಳೆಯ ಅಭಾವದಿಂದಾಗಿ, ಸರಡಗಿ ಬ್ಯಾರೇಜಿನಲ್ಲಿ ನೀರಿನ ಅಭಾವ ಉಂಟಾಗುವ ಪರಿಸ್ಥಿತಿಯು ಇದ್ದು, ಸದರಿ ಅಭಾವವನ್ನು ಸರಿಪಡಿಸಲು ಈಗಾಗಲೇ 2 ಟಿ.ಎಂ.ಸಿ ನೀರನ್ನು ಜಲಾಶಯದಲ್ಲಿ ಕಾಯ್ದಿರಿಸಲು ಸಂಬಂಧಪಟ್ಟ ಕೆಬಿಜೆಎನ್.ಎಲ್ ಅದಿಕಾರಿಗಳಿಗೆ ಜಿಲ್ಲಾಡಳಿತ ಮುಖಾಂತರ ಕೋರಲಾಗಿದೆ. ಸದರಿ ಪ್ರಮಾಣದ ನೀರನ್ನು ಮೂರು ಹಂತದಲ್ಲಿ ಹರಿಸಲು ನಿರ್ಣಯಿಸಲಾಗಿದ್ದು, ಇದರಲ್ಲಿ 1ನೇ ಹಂತದಲ್ಲಿ 0.50 ಟಿಎಂಸಿ ನೀರನ್ನು ದಿನಾಂಕ 16.01.2024 ರಂದು ನಾರಾಯಣಪುರ ಜಲಾಶಯ ಕಾಲುವೆ ಮುಖಾಂತರ ಹರಿಸಿಕೊಳ್ಳಲಾಗಿದೆ. ಪ್ರಸ್ತುತ, ನೀರಿನ ಪ್ರಮಾಣವು ಕಡಿಮೆಯಾಗಿರುವುದರಿಂದ ಮಾನ್ಯ ಪ್ರಾದೇಶಿಕ ಆಯುಕ್ತರು ಕಲಬುರಗಿ ರವರ ಆದೇಶದಂತೆ ದಿನಾಂಕ 29.02.2024 ರಂದು ನಾರಾಯಣಪುರ ಜಲಾಶಯದಿಂದ 2ನೇ ಹಂತದಲ್ಲಿ 0.70ಟಿಎಂಸಿ ನೀರನ್ನು ಬಿಡುಗಡೆಗೊಳಿಸಲಾಗಿದೆ. ಅದರಂತೆ, ಪ್ರಸ್ತುತ ಸರಡಗ್ಷಿಬ್ಯಾರೇಜಿನಲ್ಲಿ ನೀರು ಶೇಖರಣೆಯಾಗುತ್ತಿದ್ದು, ಸದರಿ ಶೇಖರಣೆಯ ನೀರು ಏಪ್ರಿಲ್-2024 ಅಂತ್ಯದವರೆಗೆ ಉಪಯೋಗಿಸಬಹುದಾಗಿದೆ. ಇದಾದ ನಂತರ 3ನೇ ಹಂತದಲ್ಲಿ ಮತ್ತೇ ನೀರನ್ನು ಜಲಾಶಯದಿಂದ ಹರಿಸಲು ಕೋರಲಾಗುವುದು. ಬೆಣ್ಣೆ ತೋರಾ ಜಲಾಶಯದ ಹಿನ್ನೀರಿನ ಕುರಿಕೋಟಾ ಇನ್ ಟೆಕ್ ವೆಲ್ ಸ್ಥಳದಲ್ಲಿ ನೀರಿನ ಮಟ್ಟವು ಕಡಿಮೆಯಾದಲ್ಲಿ 30ನೇ ಮಾರ್ಚ-2024 ನಂತರ ಗಂಡೋರಿ ನಾಲಾ ಜಲಾಶಯದಿಂದ ನೀರನ್ನು ಹರಿಸಿಕೊಳ್ಳಲು ಸಂಬಂಧಪಟ್ಟ ಕಾರ್ಯಪಾಲಕ ಅಬಿಯಂತರರು, ಕನೀನಿನಿ, ವಿಭಾಗ ಕಛೇರಿ ಐಪಿಸಿ ವಿಭಾಗ-01 ಕಲಬುರಗಿಯವರಿಗೆ ಈ ಕಛೇರಿಯ ಪತ್ರ ಸಂಖ್ಯೆ 2163, ದಿನಾಂಕ 10.11.2023ರನ್ವಯ ಮೂಲಕ ಜಲಾಶಯದಲ್ಲಿ ನೀರಿನ ಮಟ್ಟ ಕಾಯ್ದುಕೊಂಡು ಹೋಗಲು ಕೋರಲಾಗಿದೆ.
ಮುಂಜಾಗ್ರತ ಕ್ರಮಕ್ಕಾಗಿ 40 ಟ್ಯಾಂಕರ್‍ಗಳನ್ನು ಕಾಯ್ದಿರಿಸಲಾಗಿದೆ. ಸಂಖ್ಯೆಗಳನ್ನು ಹೆಚ್ಚಿಸಲಾಗುವುದು. ಪ್ರಸ್ತುತ 07 ಟ್ಯಾಂಕರಗಳು ಲಭ್ಯವಿದ್ದು, ಅವಶ್ಯಕತೆ ಅನುಗುಣವಾಗಿ ಟ್ಯಾಂಕರಗಳ ನಗರದ ಸಾರ್ವಜನಿಕರು ಕುಡಿಯುವ ನೀರಿನ ಕುರಿತು ದೂರು/ಕುಂದುಕೊರತೆಗಳಿಗಾಗಿ 08472- 237247 (ಟೋಲ್ ಪ್ರೀ ನಂ. 18004258247) ದೂರವಾಣಿಗೆ ದೂರ ದಾಖಲಿಸುವುದು ಮತ್ತು ಕಲಬುರಗಿ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್ ದೂರವಾಣಿ ಮೆಧ ಎಲ್ ್ಘ ಟಿ ಕಂಪನಿ, ಕೆಯುಐಡಿಎಫ್‍ಸಿ, ಸಂಖ್ಯೆ 0872-241364 ವ್ಯವಸ್ಥೆ ಮಾಡಲಾಗಿದ್ದು, ಇದರೊಂದಿಗೆ ಮಹಾನಗರ ಪಾಲಿಕೆಯ ಅಬಿಯಂತರರು ಹಾಗೂ ನೈರ್ಮಲ್ಯ ನೀರೀಕ್ಷಕರು ಒಳಗೊಂಡ ‘ತುರ್ತು ಪರಿಹಾರ ತಂಡ (Quick Response Team) (ಪ್ರತಿ ವಾರ್ಡ್‍ಗಳಲ್ಲಿ ನಿಯೋಜಿಸಿ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ. ಇದಲ್ಲದೇ ವಿವಿಧ ಅನುದಾನದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ 100 ಹೊಸ ಬೋರವೆಲ್‍ಗಳು (ಕೊಳವೆ ಬಾವಿಗಳು) ಕೊರೆಸಲು ಅನುಮೋದನೆಯನ್ನು ಪಡೆಯಲಾಗಿದೆ. ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ ಎಂದು ವಿವರಿಸಿದರು.