ಸಾರ್ವಜನಿಕ ಸಮಸ್ಯೆ ಆಲಿಸಿದ ಎಸ್ಪಿ, ವಾರದೊಳಗೆ ಇತ್ಯರ್ಥ

ಮಾದನಹಿಪ್ಪರಗಿ:ನ.18: ಕಲಬರಗಿ ಜಿಲ್ಲಾ ಪೋಲಿಸ್, ಆಳಂದ ಉಪವಿಭಾಗ ಆಳಂದ ಮಾದನಹಿಪ್ಪರಗಿ ಪೋಲಿಸ ಠಾಣೆಯ ವ್ಯಾಪ್ತಿಯ ನಿಂಬಾಳ ಗ್ರಾಮದಲ್ಲಿ ನಿಮ್ಮ ಮನೆ ಬಾಗಿಲಿಗೆ ಪೋಲಿಸ್ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪೋಲಿಸ್ ಆಧೀಕ್ಷಕರಾದ ಶ್ರೀಮತಿ ಇಶಾ ಪಂತ ಅವರು ಉದ್ಘಾಟಿಸಿ ಸಾರ್ವಜನಿಕರ ಅಹವಾಲಗಳನ್ನು ಆಲಿಸಿದರು.

ಗ್ರಾಮದಲ್ಲಿ ಸರಾಯಿ ಅಂಗಡಿಗಳು ಬಂದ್ ಮಾಡಬೇಕು, ಸರಕಾರಿ ಶಾಲೆಗಳಲ್ಲಿನ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ರೈತರ ಪಂಪಸೆಟಗಳು ಮತ್ತು ಕೇಬಲ್ ಕಳ್ಳತನ, ಗ್ರಾಮಸ್ಥರ ಎಮ್ಮೆಗಳ ಕದ್ದ ಕಳ್ಳರನ್ನು ಹಿಡಿಯಬೇಕು, ಯುವತಿಯ ಮಿಸ್ಸಿಂಗ್ ಕೇಸ್, ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಲು ಬಸ್ಸಿನ ಸೌಕರ್ಯ, ನಿಂಬಾಳದಲ್ಲಿ ಪಿಯು ಕಾಲೇಜು ಸ್ಥಾಪನೆ ಎಂಬ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸಾರ್ವಜನಿಕರು ವಿದ್ಯಾರ್ಥಿನಿಯರು ವಯೋವೃದ್ಧರು ಮಕ್ಕಳು ಒಬ್ಬೊಬ್ಬರಾಗಿ ಎಸ್ಪಿಯವರ ಮುಂದೆ ಸಾರ್ವಜನಿಕರು ಹೇಳಿದರು. ಸಮಾಧಾನದಿಂದ ಎಲ್ಲವನ್ನು ಆಲಿಸಿದ ಎಸ್ಪಿಯವರು ಪೋಲಿಸರೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ರೈತರ ಪಂಪಸೆಟಗಳನ್ನು ಎಮ್ಮೆಗಳ ಕಳ್ಳತನ ಬೇಜಾರು ವ್ಯಕ್ತಪಡಿಸಿ, ಗಡಿಭಾಗವಾಗಿರುವುದರಿಂದ ನೆರೆ ರಾಜ್ಯದ ಕಳ್ಳರು ಇಲ್ಲಿ ಕಳ್ಳತನ ಮಾಡುತ್ತಾರೆ. ಕೆಲ ಗ್ಯಾಂಗಗಳು ಇವೆ. ಇದಕ್ಕೆ ವಿಶೇಷ ತಂಡ ರಚನೆ ಮಾಡಾಗುವುದು. ಒಂದುವಾರದಲ್ಲಿ ವರದಿ ನೀಡಲು ತಿಳಿಸಿದ್ದೇನೆ. ಸಂಶಯಾಸ್ಪದ ವ್ಯಕಿಗಳ್ತು ನಿಮ್ಮ ಪರಿಸರದಲ್ಲಿ ಕಂಡು ಬಂದರೆ 112 ನಂ.ಗೆ ಕಾಲ್ ಮಾಡಬಹುದು. ಸರಾಯಿ ಅಂಗಡಿಗಳನ್ನು ಅಬಕಾರಿ ಇಲಾಖೆಯವರನ್ನು ಕರೆಯಿಸಿ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು. ನಿಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಯನ್ನು ಬೇಟಿ ಮಾಡಿ ಬಗೆಹರಿಸಿಕೊಳ್ಳಿ, ನನ್ನ ಇಲಾಖೆಯ ವ್ಯಪ್ತಿಯಲ್ಲಿ ಬರುವ ಕೆಲಸಗಳು ನಾನು ಮಾಡಿಕೊಡುತ್ತೇನೆ. ಒಂದೇ ಸಲಕ್ಕೆ ಆಗದೆ ಇದ್ದರೆ ಒಂದೆರಡು ಸಲ ಫಾಲೋ ಮಾಡಿರಿ ಎಂದರು.

ಕಾರ್ಯಕ್ರಮದಲ್ಲಿ ಆಳಂದ ಡಿವಾಯ್‍ಎಸ್ಪಿ ರವೀಂದ್ರ ಶಿರೂರ, ಸಿಪಿಆಯ್ ಬಾಸು ಚವ್ಹಾಣ, ನಿಂಬಾಳ ಗ್ರಾಮ ಪಂಚಾಯತ ಅಧ್ಯಕ್ಷೆ ಯಲ್ಲಾಬಾಯಿ ಹವಳೇಕರ್,ಪಂಚಾಯತ ಅಭಿವೃದ್ಧಿ ಅಧಿಕಾರಿ ಓದುಲಿಂಗ ಸಿ.ಕೆ, ಮಾದನಹಿಪ್ಪರಗಿ ಪೋಲಿಸ ಠಾಣೆಯ ಪಿಎಸ್‍ಆಯ್ ದಿನೇಶ, ನಿಂಬರಗಾ ಠಾಣೆಯ ಭೀಮರಾಯ ಬಂಕಲಗಿ, ರೇವೂರ ಠಾಣೆಯ ಶ್ರೀಮತಿ ಗಂಗಮ್ಮ, ಜೆಸ್ಕಾಂ ಜೆ.ಇ ಪರಮೇಶ್ವರ ಬಡಿಗೇರ, ಗುರುಶಾಂತಪ್ಪ ಪಾಟೀಲ, ಬಸವರಾಜ ಸಾಣಕ್, ಬಸವರಾಜ ಸಿಂಗಸೆಟ್ಟಿ ವೇದಿಕೆಯ ಮೇಲಿದ್ದರು. ಮುಖಂಡರಾದ ಬಸಲಿಂಗಯ್ಯ ಸ್ವಾಮಿ, ಲಕ್ಷ್ಮಣ ತಳಕೇರಿ, ವಿರೂಪಾಕ್ಷ ಹಿರೇಮಠ ಚಂದು ಗದ್ದಿಗೆ, ಸಿದ್ದರಾಮ ಬುಳ್ಳಾ, ಗಣೇಶ ಒಡ್ಡಳ್ಳಿ, ಲಕ್ಷ್ಮಣ ಹೋಳಿಕೇರಿ, ಸಂಗಮ್ಮ ಸಾಣಕ್, ಸಿದ್ದರಾಮ ಅರಳಿಮಾರ, ಪ್ರಭು ಎಸ್.ಪಾಟೀಲ ಮಹಿಬೂಬ್ ಫಣಿಬಂದ್, ಬಸವರಾಜ ಕರೆಪ್ಪಗೊಳ, ಸೋಮನಾಥ ಕೌಲಗಿ, ಮಹಿಬೂದ ಭಾಗವಾನ ಉಪಸ್ಥಿತರಿದ್ದರು.