ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಚೆಸ್ಕಾಂ ಸಿದ್ಧ

ಪಿರಿಯಾಪಟ್ಟಣ: ನ.05:- ಗ್ರಾಹಕರ ಮತ್ತು ರೈತರ ಕುಂದು-ಕೊರತೆಗಳನ್ನು ಸರಿ ಪಡಿಸುವುದು ಚೆಸ್ಕಾಂನ ಮುಖ್ಯ ಕರ್ತವ್ಯವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಇಲಾಖೆ ಸಧಾ ಸಿದ್ಧವಿದೆ ಎಂದು ಮೈಸೂರು ವಿದ್ಯುತ್ ಸರಬರಾಜು ಕಂಪನಿಯ ಅಧೀಕ್ಷಕ ಇಂಜಿನಿಯರ್ ನಾಗೇಶ್ ತಿಳಿಸಿದರು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಹಕರ ಕುಂದು-ಕೊರತೆ ಮತ್ತು ಸಂವಾದ ಸಭೆಯಲ್ಲಿ ಮಾತನಾಡಿದರು.
ಚೆಸ್ಕಾಂ ನಿಗಮದಿಂದ ವಿದ್ಯುತಿನ ಕುರಿತು ಮತ್ತು ಇದಕ್ಕೆ ಸಂಬಂಧಿಸಿದಂತೆ ಇನ್ನಿತರ ಯಾವುದೇ ಕೆಲಸಗಳಿಗೆ ನಿಗಮ ಮತ್ತು ಅಧಿಕಾರಿಗಳು ಗ್ರಾಹಕರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ. ನಿಗಮದವರಿಗೆ ಸಾರ್ವಜನಿಕರ ಮತ್ತು ರೈತರ ಸಹಕಾರ ಅಗತ್ಯವಾಗಿದೆ ಎಂದರು. ಗ್ರಾಹಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ನಮ್ಮ ಬಳಿ ತೆಗೆದುಕೊಂಡು ಬಂದರೆ ಅಂಥವರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವುದರ ಜತೆಗೆ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತರು ಹಾಗೂ ಗ್ರಾಮಹಕರು ಮಾತನಾಡಿ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ರೈತರ ಐಪಿ ಸಟ್ ಗಳಿಗೆ ದಿನದ 7 ಗಂಟೆ ವಿದ್ಯುತ್ ಸರಬರಾಜು ಒದಗಿಸಬೇಕು, ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿರುವವರಿಗೆ ಅವಕಾಶ ಕಲ್ಪಿಸಕೊಡಬೇಕು, ಹೊಸದಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿರುವ ರಸ್ತೆಗಳ ಇಕ್ಕೆಲಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು, ಕಂಬಗಳಿಗೆ ಅಳವಡಿಸಿದ ಹಳೆ ವಾಯರ್‍ಗಳನ್ನು ಬದಲಾವಣೆ ಮಾಡಬೇಕು. ಮಾರ್ಗದಾಳಗಳು ಸ್ಥಾನಿಕ ಸ್ಥಳದಲ್ಲಿ ಇರುವಂತಾಗಬೇಕು. ಅಪಾಯ ಹಾಗೂ ಮುರಿಯುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ಪಟ್ಟಣದಲ್ಲಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವಂತೆ ಸಭೆಯಲ್ಲಿದ್ದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚೆಸ್ಕಾಂ ಕಾರ್ಯನಿರ್ವಹಕ ಇಂಜಿನೀಯರ್ ಪ್ರದೀಪ್, ಎಇಇ ಸುನೀಲ್ ಯಾದವ್, ಎಇ ಶಶಿಕುಮಾರ್, ಜೆಇಗಳಾದ ಚಂದ್ರಶೇಖರ್, ಮಾದೇಶ್, ಶಿವಕುಮಾರ್, ಜಗದೀಶ್ ಮಲಬಾರ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ರಫಿ ರೈತ ಮುಖಂಡರಾದ ಪ್ರದೀಪ್, ಮಲ್ಲಿಕ್, ಸೈಯದ್ ಅಬ್ಬಾಸ್, ರಾಮೇಗೌಡ, ಚಿಕ್ಕಣ್ಣಗೌಡ, ಕುಮಾರ್, ಸುರೇಶ್, ಪ್ರಶಾಂತ್, ಜವರೇಗೌಡ, ನಾರಾಯಣ್ ಸೇರಿದಂತೆ ಸಾರ್ವಜನಿಕರು, ರೈತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.