ಸಾರ್ವಜನಿಕ ಸಭೆ ನಿಷೇಧಿಸಿ ಡಿಸಿ ಆದೇಶ

ಬಳ್ಳಾರಿ,ಮಾ.27: ಸಾರ್ವನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನೋವೆಲ್ ಕೊರೋನಾ ವೈರಾಣು ಹೆಚ್ಚಾಗಿ ಹರಡದಂತೆ ತಡೆಯುವ ಉದ್ದೇಶದಿಂದ ಏ.30ರವರೆಗೆ ಯುಗಾದಿ, ಹೋಳಿ, ಷಬ್-ಎ-ಬರಾತ್, ಗುಡ್‍ಫ್ರೈಡೇ, ಜಾತ್ರಾ ಉತ್ಸವಗಳು, ಸಮಾಜ ಸುಧಾರಕರು ಹಾಗೂ ಗಣ್ಯರ ಜಂಯಂತಿಗಳು ಸೇರಿದಂತೆ ಹಬ್ಬಗಳಲ್ಲಿ ಹೆಚ್ಚಿನ ಜನ ಸೇರಿ ಗುಂಪುಗೂಡುವುದು ಮತ್ತು ಸಾರ್ವಜನಿಕ ಸಭೆ ನಡೆಸುವುದು ನಿಷೇಧಿಸಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಹೆಚ್ಚಿನ ಜನ ಸೇರುವ ಸಮಾರಂಭಗಳು, ಆಚರಣೆಗಳು ಸಾರ್ವಜನಿಕರು ಗುಂಪು ಸೇರಬಹುದಾದ ಇತರೆ ಚಟುವಟಿಕೆಗಳು ಮತ್ತು ಸಾರ್ವಜನಿಕರ ಬಹಿರಂಗ ಸಭೆಗಳನ್ನು ಮಾಡುವುದು ನಿಷೆಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ಜಿಪಂ ಸಿಇಒ,ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಗಳು, ಜಿಲ್ಲೆಯಲ್ಲಿರುವ ಬಳ್ಳಾರಿ,ಹೊಸಪೇಟೆ,ಹರಪನಳ್ಳಿ ಸಹಾಯಕ ಆಯುಕ್ತರು ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ ಹಾಗೂ ಈ ಆದೇಶದ ಅನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.