ಸಾರ್ವಜನಿಕ ಶೌಚಾಲಯ, ಉದ್ಯಾನವನ ನಿರ್ಮಾಣಕ್ಕೆ ಒತ್ತಾಯ

ಲಿಂಗಸೂಗೂರು.ಡಿ.೨೭- ತಾಲೂಕು ಕಚೇರಿಗಳ ಆವರಣದಲ್ಲಿ ಸಾರ್ವಜನಿಕ ಶೌಚಾಲಯ, ಉದ್ಯಾನವನ ನಿರ್ಮಾಣ ಮಾಡಲು ಒತ್ತಾಯಿಸಿ ಸಹಾಯಕ ಆಯುಕ್ತರು ಲಿಂಗಸುಗೂರು ಇವರಿಗೆ ನಮ್ಮ ಕರ್ನಾಟಕ ಸೇನೆ ಮನವಿಯನ್ನು ಸಲ್ಲಿಸಿದರು.
ಲಿಂಗಸುಗೂರು ಪಟ್ಟಣದಲ್ಲಿರುವ ಸಹಾಯಕ ಆಯುಕ್ತರ ಕಚೇರಿ ಸೇರಿ ವಿವಿಧ ಇಲಾಖೆ ಕಚೇರಿಗಳಿಗೆ ಕಾರ್ಯನಿಮಿತ್ತ ನಿತ್ಯ ನೂರಾರು ಜನ ಬರುತ್ತಾರೆ. ಬರುವ ಜನರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ಇದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದೇ ಇರುವುದು ವಿಪರ್ಯಾಸ, ಸಾರ್ವಜನಿಕ ಶೌಚಾಲಯ ಇಲ್ಲದ ಪರಿಣಾಮ ಕಾಂಪೌಂಡ್ ಗೋಡೆ, ಕಚೇರಿಗಳ ಹಿಂಭಾಗವೇ ಜನರ ಶೌಚ ತಾಣವಾಗಿದೆ. ಮಹಿಳೆಯರ ಪರಿಸ್ಥಿತಿಯಂತೂ ಹೇಳತೀರದಷ್ಟು ಇದೆ.
ಸಬ್ ರಜಿಸ್ಟ್ರಾರ್ ಕಚೇರಿಗಂತೂ ಮಹಿಳೆಯರೂ ಸೇರಿದಂತೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಬಂದ ಜನರಿಗೆ ಕುಳಿತು ಕೊಳ್ಳಲಿಕ್ಕೆ ಕನಿಷ್ಠ ಆಸನಗಳ ವ್ಯವಸ್ಥೆಯೂ ಇಲ್ಲ. ಇರುವ ಡಬ್ಬಾ ಹೋಟೆಲ್‌ಗಳಲ್ಲಿಯೆ ಚಹಾ ಕುಡಿಯುತ್ತ ಕೂಡುವ ಅನಿವಾರ್ಯತೆ ಇಲ್ಲಿದೆ. ಈ ಬಗ್ಗೆ ಮಾಧ್ಯಮಗಳೂ ಬೆಳಕು ಚೆಲ್ಲಿವೆ.
ಕೂಡಲೇ ಕಚೇರಿ ಆವರಣದಲ್ಲಿನ ಉದ್ಯಾನವನ ಅಭಿವೃದ್ಧಿ ಪಡಿಸಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆ ಕಲ್ಪಿಸಬೇಕುಂದು ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದ ತಾಲ್ಲೂಕು ಅದ್ಯೆಕ್ಷರಾದ ಶಿವರಾಜ್ ನಾಯಕ ನೇತೃತ್ವದಲ್ಲಿ ಈ ಮೂಲಕ ಒತ್ತಾಯಿಸಿದರು ಈ ಸಂದರ್ಭದಲ್ಲಿ ಕರವೇ ಕಾರ್ಯ ಕರ್ತರಾದ ನಿರೂಪಾದಿ ಚಂದ್ರು ನಾಯಕ ಬಸವರಾಜ ನಾಯಕ ಚಂದ್ರಕಾಂತ ಭೋವಿ ಶಿವರಾಜ್ ಅಲಬನೂರು ಮಂಜುನಾಥ್ ವೆಂಕಟೇಶ್ ಇನ್ನಿತರರು ಇದ್ದರು.