ಸಾರ್ವಜನಿಕ ವಿನಾಯಕ ಸಂಘದಿಂದ  ಪೂರ್ವಭಾವಿ ಸಭೆ 

Deity of Ganesha from India on white background

ಹರಿಹರ ಜು 17; ಪ್ರತಿ ವರ್ಷದಂತೆ ಈ ವರ್ಷವೂ ಮಹಾತ್ಮಗಾಂಧಿ ಕ್ರೀಡಾಂಗಣ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘದ ಆಶ್ರಯದಲ್ಲಿ ಗಣಪತಿ ಹಬ್ಬವನ್ನು ಆಚರಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಜು 16 ರಂದು  ಬೆಳಿಗ್ಗೆ 11 ಗಂಟೆಗೆ ನಗರದ ರಚನಾ ಟ್ರಸ್ಟಿನಲ್ಲಿ  ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು 

ಕನ್ನಡ ಪರ ಗಣಪತಿ ವಿನಾಯಕ ವಿಘ್ನೇಶ್ವರ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಯವರು ರೈತಸಂಘದ ಮುಖಂಡರು ಸಾಹಿತಿಗಳು ಚಿಂತಕರು ಚುನಾಯಿತ ಪ್ರತಿನಿಧಿಗಳು ಪತ್ರಿಕಾ ಮಿತ್ರರು ವಿಘ್ನೇಶ್ವರನ ಆರಾಧಕರು ವಿವಿಧ ಸಮಾಜದ ಮುಖಂಡರು ಯುವಕರು ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರುಗಳು ಪೂರ್ವ ಭಾವಿ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿ ಮುಂಬರುವ ಗಣೇಶ ಚತುರ್ಥಿಯನ್ನು ಯಶಸ್ವಿಯಾಗಿ ಆಚರಿಸಲು ಸಹಕರಿಸಬೇಕೆಂದು ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ಯೋಗೇಶ್ ಪಾಟೀಲ್. ಪ್ರಧಾನ ಕಾರ್ಯದರ್ಶಿ ಸಿ ಎನ್ ಪ್ರಕಾಶ್. ಎಚ್ ನಿಜಗುಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.