
ಬೀದರ,ಮಾ.16: ಭಾರತ ಚುನಾವಣಾ ಆಯೋಗದ ನವದೆಹಲಿ ಅವರು ಮಾರ್ಚ್ 10 ರಂದು ಜರುಗಿದ ಸಭೆಯಲ್ಲಿ ನೀಡಿರುವ ನಿರ್ದೇಶನದಂತೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಪ್ರಯುಕ್ತ ಸಾರ್ವಜನಿಕ ಮತ್ತು ಸರಕಾರಿ ಸ್ಥಳಗಳಲ್ಲಿನ ಬ್ಯಾನರ್, ಬಟ್ಟಿಂಗ್ಸ್, ಕಟೌಟ್, ಪೋಸ್ಟರ್, ಹಾರ್ಡಿಂಗ್ಸ್, ಪ್ಲ್ಯಾಕ್ಸ್, ವಾಲ್ ಪೇಂಟಿಂಗ್ಸ್ ಅಧಿಕೃತವಾಗಿ ಪರವಾನಿಗೆ ತೆಗೆದುಕೊಳ್ಳದೆ ಅಳವಡಿಸುವವರ ವಿರುದ್ಧ ಏಚಿಡಿಟಿಚಿಣಚಿಞಚಿ ಔಠಿeಟಿ Pಟಚಿಛಿe ಆisಜಿiguಡಿemeಟಿಣ ಂಛಿಣ 1981 ರ ಪ್ರಕಾರ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಕೂಡಲೇ ಎಲ್ಲಾ ಅಧಿಕೃತ ಪರವಾನಿಗೆ ಪಡೆದ ಬ್ಯಾನರ್, ಬಟ್ಟಿಂಗ್ಸ್, ಕಟೌಟ್, ಪೋಸ್ಟರ್, ಹಾರ್ಡಿಂಗ್ಸ್, ಪ್ಲ್ಯಾಕ್ಸ್, ವಾಲ್ ಪೇಂಟಿಂಗ್ಸ್‍ಗಳನ್ನು ತೆಗೆಯಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.