ಸಾರ್ವಜನಿಕ ಕುಂದು-ಕೊರತೆಗಳ ಆಲಿಸಿದ ರವಿ ಬೋಸರಾಜು

ರಾಯಚೂರು,ಡಿ.೧೦-ರಾಯಚೂರಿನ ಹರಬ್ ಮೊಹಲ್ಲಾ ಬಡಾವಣೆಯಲ್ಲಿ ಸ್ವಚ್ಛತೆ ಕುರಿತಂತೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಬಡಾವಣೆ ವೀಕ್ಷಣೆ ಸಂದರ್ಭದಲ್ಲಿ ಬಡಾವಣೆಯ ಜನರು ರೇಷನ್ ಕಾರ್ಡ್, ಚರಂಡಿ ವ್ಯವಸ್ತೆ, ಕುಡಿಯುವ ನೀರು, ಇ-ಖಾತ, ವಸತಿ ರಹಿತರಿಗೆ ವಸತಿ ಸೇರಿದಂತೆ ವಿವಿಧ ಕುಂದುಕೊರತೆಗಳ ಕುರಿತು ತಿಳಿಸಿದರು.
ಸಮಸ್ಯೆಗಳ ಪರಿಹಾರ ಕುರಿತು ಸಂಬಂದಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಶೀಘ್ರ ಸಮಸ್ಯೆಗಳ ಪರಿಹರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸಿಬ್ಬಂದಿ ಜಗದೀಶ್ ಭಂಡಾರಿ, ವಿನೋದ್ ಕುಮಾರ್, ಮುದ್ಧಾಸೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.