ಸಾರ್ವಜನಿಕ ಕುಂದುಕೊರತೆ ಅವಹಾಲುಸ್ವೀಕಾರ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.22 ಪಟ್ಟಣದ ತಾಲೂಕು ಕಛೇರಿ ಸಬಾಂಗಣದಲ್ಲಿ ಬುಧವಾರ ಕರ್ನಾಟಕ ಲೊಕಾಯುಕ್ತ ಬಳ್ಳಾರಿ  ಇವರ ನೇತೃತ್ವದಲ್ಲಿ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅದ್ಯಕ್ಷತೆಯನ್ನು ಲೋಕಾಯುಕ್ತ  ಪೋಲೀಸ್ [ಡಿಎಸ್‍ಪಿ.] ಕೆ.ರಾಮಾರಾವ್ ಮಾತನಾಡಿ, ಸರ್ಕಾರದ ಯೋಜನೆಗಳಾದ ಸಂದ್ಯಾಸುರಕ್ಷಾಯೋಜನೆ, ವಿಧವಾವೇತನ, ವೃದ್ದಾಪ್ಯವೇತನ ಸೇರಿದಂತೆ ಇತರೆ ಯೋಜನೆಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ತಲುಪಿಸುವಲ್ಲಿ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಕಾರ್ಯನಿರ್ವಹಿಸಬೇಕೆಂದು ಕಂದಾಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಯಾವುದೇ ರೀತಿಯಲ್ಲಿ ಹಿರಿಯನಾಗರಿಕರು, ಮಹಿಳೆಯರು, ಅಂಗವಿಕಲರು ಸೇರಿದಂತೆ ಇತರೆ ಅರ್ಹಫಲಾನುಭಿವಿಗಳಿಗೆ ವಿಳಂಬಮಾಡದೇ  ಸಕಾಲಕ್ಕೆ ಸೌಲಭ್ಯಗಳನ್ನು ಮುಟ್ಟಿಸಬೇಕೆಂದು ತಾಕೀತುಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಯಾವುದೇ ಕಾರಣಕ್ಕೂ ವಿಳಂಬಮಾಡದೇ ಸಕ್ರಿಯವಾಗಿ ಸೇವೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಕುರುಗೋಡು ತಾಲೂಕುನ್ನು ಇನಾಮ್ ಮುಕ್ತ ತಾಲೂಕು ಮಾಡಲು ಎಲ್ಲಾರೂ ಸಕ್ರಿಯವಾಗಿ ಶ್ರಮಿಸಬೇಕೆಂದು ನುಡಿದರು.
ಲೋಕಾಯುಕ್ತ ಸಿಪಿಐ ಮಹಮ್ಮದ್‍ರಫಿ ಮಾತನಾಡಿ, ಕುರುಗೋಡು ತಾಲೂಕಿನಲ್ಲಿ ವಿವಿದ  ಇಲಾಖೆಯ ಅಧಿಕಾರಿಗಳು,  ಸಾರ್ವಜನಿಕರ ಕೆಲಸಗಳನ್ನು ಯಾವುದೇ ಕಾರಣಕ್ಕೂ ಪೆಂಡಿಂಗ್ ಇಡಬಾರದು, ಆದಷ್ಟು ಬೇಗನೇ ಮುಗಿಸಿ ಸಾರ್ವಜನಿಕರ ಸೇವೆ ಮಾಡಬೇಕೆಂದು ನುಡಿದರು.
ಪ್ರಚಾರದ ಕೊರತೆ ;  ಲೋಕಾಯುಕ್ತ ಪೋಲೀಸ್ ಅಧಿಕಾರಿಗಳಿಂದ ನಡೆಯುವ ಮಾಸಿಕಸಭೆಗೆ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಿಲ್ಲ. ಇದಕ್ಕೆ ಕಾರಣ ಪ್ರಚಾರದ ಕೊರತೆ ಕಂಡಿದ್ದು, ಮುಂದಿನಸಭೆಗೆ ಈಗಾಗದಂತೆ ಮುಂಜಾಗ್ರಕ್ರಮವಾಗಿ ಸ್ಥಳೀಯವಾಗಿ ಮಾದ್ಯಮ ಹಾಗು ಸಾರ್ವಜನಿಕರಿಗೆ ಸಭೆಯ ಕುರಿತು ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಸಭೆಯನ್ನು ಆಯೋಜಿಸಲಾಗುವುದು ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಭರವಸೆ ನೀಡಿದರು. ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್, ಗ್ರೇಡ್2 ತಹಶೀಲ್ದಾರ ಮಲ್ಲೇಶಪ್ಪ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲ, ಉಪತಹಶೀಲ್ದಾರ್ ವಿಜಯಕುಮಾರ್, ಆರ್‍ಐ. ಕರಿಬಸಪ್ಪ, ಸೇರಿದಂತೆ ಕುರುಗೋಡು ತಾಲೂಕಿನ ಎಲ್ಲಾ ಗ್ರಾಮಗಳ ಗ್ರಾಮಲೆಕ್ಕಾದಿಕಾರಿಗಳು, ಸಾರ್ವಜನಿಕರು ಇದ್ದರು.