ಸಾರ್ವಜನಿಕ ಆಸ್ಪತ್ರೆ- ಇಂದಿರಾ ಕ್ಯಾಂಟೀನ್ ಗೆ  ಶಾಸಕ ಬಿ.ದೇವೇಂದ್ರಪ್ಪ ಭೇಟಿ

ಜಗಳೂರು.ಜೂ.೨೦; ಪಟ್ಟಣದ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಶಾಸಕ ಚಿಕ್ಕಮ್ಮನ ಹಟ್ಟಿ ಬಿ. ದೇವೇಂದ್ರಪ್ಪ  ಸಾರ್ವಜನಿಕರಂತೆ ಕ್ಯಾಂಟೀನ್ ನಲ್ಲಿ ತಿಂಡಿ ತಿಂದು ಅಲ್ಲಿನ ಅಡಿಗೆ ಸಿಬ್ಬಂದಿಗಳಿಗೆ ಪಟ್ಟಣದ ಜನತೆಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡಬೇಕು ಇಲ್ಲಿ ಬಂದು ತಿನ್ನುವವರು ಪೌರಕಾರ್ಮಿಕರು ಮತ್ತು ಆಸ್ಪತ್ರೆಗೆ ಬಂದಂತ ಜನಸಾಮಾನ್ಯರು ಹಾಗೂ ಬಡವರು ತಿನ್ನುತ್ತಾರೆ ಇದು ನಮ್ಮ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅವರ ಆಶಯದಂತೆ ಹಸಿದವರಿಗೆ ಅನ್ನ ನೀಡಬೇಕು ಎಂಬುದಾಗಿದೆ ನೀವು ಪ್ರತಿನಿತ್ಯ ಸರ್ಕಾರದ ಮೆನು ಚಾರ್ಟ್ ಪ್ರಕಾರ ಊಟ ತಿಂಡಿ ನೀಡಬೇಕು ಮತ್ತು ಸ್ವಚ್ಛತೆ. ಶುದ್ಧ ಕುಡಿಯುವ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು ಆಸ್ಪತ್ರೆಯ ರೋಗಿಗಳಿಗೆ ಬಿಸಿನೀರು ಗಂಜಿ ಕೊಡುವಂತಹ ಕೆಲಸ ನೀವು ಮಾಡಬೇಕು ಎಂದು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಫೋನ್ ನಲ್ಲಿ ತರಾಟೆ ತೆಗೆದುಕೊಂಡರು ನಂತರ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಮಾತನಾಡಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ನಿಮಗೆ ಒಳ್ಳೆಯ ಚಿಕಿತ್ಸೆ ನೀಡುತ್ತಾರ ಎಂದು ರೋಗಿಗಳ ಯೋಗ ಕ್ಷೇಮ ವಿಚಾರಿಸಿ ನಂತರ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಮಾತನಾಡಿ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಚಿಕಿತ್ಸೆ ಮಾಡಬೇಕು ಸರಿಯಾದ ರೀತಿಯಲ್ಲಿ ಆಸ್ಪತ್ರೆಯಲ್ಲಿ ಔಷಧಿ. ಮಾತ್ರೆಗಳನ್ನು ನೀಡಬೇಕು. ಆಸ್ಪತ್ರೆಗೆ ಸಂಬಂಧಪಟ್ಟಂತೆ ಏನೇ ಸಮಸ್ಯೆ ಇದ್ದರೂ ನನಗೆ ತಿಳಿಸಿ ನಾನು ನಿಮ್ಮ ಮೇಲಧಿಕಾರಿಗಳಿಗೆ ಮಾತನಾಡಿ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಔಷಧಿ ಸೇರಿದಂತೆ ನಿಮ್ಮ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತೇನೆ ಮತ್ತು ಆಸ್ಪತ್ರೆಯನ್ನು ಸ್ವಚ್ಛತೆ ಕಾಪಾಡಬೇಕು ಎಂದು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು