ಸಾರ್ವಜನಿಕ ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ; ಕುಂದುಕೊರತೆ ವಿಚಾರಣೆ

ಬಂಗಾರಪೇಟೆ, ಆ, ೮- ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರು ರೋಗಿಗಳೊಂದಿಗೆ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಸಮಾಲೋಚನೆ ನಡೆಸಿದರು.
ಶಾಸಕರನ್ನು ಕಂಡ ಅಧಿಕಾರಿ ಎಎಂಒ ಭಾರತಿ ಅವರು ತಮ್ಮ ಆಸನವನ್ನು ಬಿಟ್ಟುಕೊಡಲು ಯತ್ನಿಸಿದಾಗ ಶಾಸಕರು ಈ ಆಸ್ಪತ್ರೆಗೆ ಉನ್ನತ ಅಧಿಕಾರಿತಾವಾಗಿದ್ದು ನಿಮ್ಮ ಕುರ್ಚಿಯಲ್ಲಿ ನಾವು ಕುಳಿತುಕೊಳ್ಳಬಾರದು, ಈ ರೀತಿಯಾಗಿ ಜನಪ್ರತಿನಿಧಿಗಳಿಗೆ ನಿಮ್ಮ ಸ್ಥಾನವನ್ನು ಬಿಟ್ಟು ಕೊಡುವುದು ಸಮಂಜಸವಲ್ಲ, ನಾನು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದಾಕ್ಷಣ, ಇದನ್ನು ಕಂಡ ಸಾರ್ವಜನಿಕರು ಬೆಕ್ಕಸ ಬೆರಗಾದರು.
ಅನಿತಾ ಎಂಬ ವೈದ್ಯಾಧಿಕಾರಿಯ ವಿರುದ್ಧ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು ಅವರನ್ನು ವರ್ಗಾವಣೆ ಮಾಡುವಂತೆ ಮಾನ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ ಆದಷ್ಟು ಬೇಗ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ ಎಂದರು.
ಆನಂತರ ಔಷಧಿ ಉಗ್ರಾಣ, ಕಣ್ಣಿನ ಶಸ್ತ್ರಚಿಕಿತ್ಸೆ ಕೊಠಡಿ, ಸ್ಕ್ಯಾನಿಂಗ್, ಎಕ್ಸರೇ ವಾರ್ಡುಗಳನ್ನು ಪರಿಶೀಲಿಸಿ ಅಲ್ಲಿನ ಅಸಮರ್ಪಕ ನಿರ್ವಹಣೆಗಳನ್ನು ಸರಿಪಡಿಸಿಕೊಳ್ಳುವಂತೆ ತಾಕಿತ್ತು ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಉಮರ್, ಸುಧಾಕರ್, ಅನಿತಾ ಇವರ ಕಾರ್ಯನಿರ್ವಹಣೆ ಅತ್ಯಂತ ಪ್ರಶಂಸನಿಯವಾಗಿದ್ದು ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಲೋಪಗಳಿದ್ದು ಅದನ್ನು ಸರಿಪಡಿಸಿಕೊಳ್ಳುವಂತೆ ತಾಕಿತ್ತು ಮಾಡಲಾಗಿದೆ ಹಾಗೂ ರೋಗಿಗಳೊಂದಿಗೆ ಚರ್ಚಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಯಾರ ಬಳಿಯಲ್ಲಿಯೂ ಸಹ ಲಂಚ ಪಡೆಯದೆ ಸೇವೆ ಸಲ್ಲಿಸುತ್ತಿರುವುದು ಮೆಚ್ಚುಗೆಯಾಗಿದೆ ಎಂದರು.
ನಕಲಿ ರೈತಸಂಘದ ಆರೋಪಗಳಿಗೆ ಕಿವಿ ಕೊಡಬೇಡಿ:
ನಾನು ನಿರಂತರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತಿರುತ್ತೇನೆ, ಆದರೆ ಕೆಲವು ನಕಲಿ ರೈತ ಸಂಘದ ನಾಯಕರು ಅನಗತ್ಯವಾಗಿ ಆಸ್ಪತ್ರೆ ವಿರುದ್ಧ ಬಾಯಿ ಚಪಲದಿಂದ ಆರೋಪಗಳನ್ನು ಮಾಡುತ್ತಾರೆ, ಇವರ ಬಗ್ಗೆ ಯಾರು ಕಿವಿಗೊಡಬೇಡಿ ಎಂದರು.
ಸ್ಕ್ಯಾನಿ೦ಗ್ ಮತ್ತು ಡಯಾಲಿಸಿಸ್ ಕೇಂದ್ರ ಸ್ಥಾಪನೆ:
ನಮ್ಮ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ಬೇಕಾಗುವ ಅಗತ್ಯ ಸೌಲಭ್ಯವಿದ್ದು ನಿರ್ವಾಹಕರ ಕೊರತೆ ಇದೆ ಕೆಜಿಎಫ್‌ನಿಂದ ವಾರಕ್ಕೆ ಒಂದು ದಿನ ನಿರ್ವಾಹಕರು ಬರುತ್ತಿರುವುದು ಕಂಡುಬಂದಿದ್ದು, ಡಿಎಚ್‌ಒ ಅವರೊಂದಿಗೆ ಮಾತನಾಡಿ, ಆದಷ್ಟು ಬೇಗ ನಿರ್ವಾಹಕರನ್ನು ನೇಮಕ ಮಾಡಲಾಗುವುದು, ಹಾಗೂ ಡಯಾಲಿಸಿಸ್ ಸೆಂಟರ್‌ನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಮುಕ್ತ ಅವಕಾಶ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಎಂಬಿ ವೈದ್ಯಾಧಿಕಾರಿ ಭಾರತಿ. ಟಿಎಚ್‌ಒ ಕೃತಿಕ್ ಸ್ವಾಮಿ. ಆರೋಗ್ಯ ಸಮನ್ವಯ ಅಧಿಕಾರಿ ಅನಿತಾ. ಆರೋಗ್ಯ ನಿರೀಕ್ಷಕರು ರವಿ. ಗೋವಿಂದ್ ರಾಜ್.