ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಶಾಸಕರ ಭೇಟಿ ಪರಿಶೀಲನೆ 

ಹರಿಹರ ನ 10;  ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ  ಆಡಳಿತ ವೈದ್ಯಾಧಿಕಾರಿಗಳು ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ತೊಂದರೆಗಳ ಆಗುತ್ತಿರುವ ಬಗ್ಗೆ  ದೂರು ಬಂದ ಹಿನ್ನೆಲೆಯಲ್ಲಿಮಾಜಿ ಶಾಸಕ ಬಿ ಪಿ ಹರೀಶ್ ಆಸ್ಪತ್ರೆಗೆ ಭೇಟಿ ನೀಡಿ  ಪ್ರತಿ ವಾರ್ಡ್ ಗಳಿಗೆ ತೆರಳಿ  ಪರಿಶೀಲನೆ ನಡೆಸಿದರು ಹೆರಿಗೆಯದ ಮಹಿಳೆಯರಿಗೆ ಬೆಳಗಿನ ಉಪಾಹಾರ ಮಧ್ಯಾಹ್ನದ ರಾತ್ರಿಯ ಬಾಣಂತಿಯರಿಗೆ ಊಟದ ವ್ಯವಸ್ಥೆಯನ್ನು ಸರಿಯಾಗಿ ಮಾಡುತ್ತಿಲ್ಲ ಬೆಳಿಗ್ಗೆ ಕೊಟ್ಟರೆ   ಮಧ್ಯಾಹ್ನ  ಕೊಡುವುದಿಲ್ಲ ರಾತ್ರಿಯ ವೇಳೆ ಬಾಣಂತಿಯರಿಗೆ ಉಪಾಹಾರದ ವ್ಯವಸ್ಥೆಯನ್ನು ಕೇಳುವವರು ಯಾರೂ ಇಲ್ಲದಂತಾಗಿದೆ ಯಾರೋ ಬರುತ್ತಾರೆ ಒಂದು ಹೊತ್ತಿನ ಗಂಜಿ ಮತ್ತೆ ಬಾಣಂತಿಯರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾದ ಬಾಣಂತಿಯರು ಸಾರ್ವಜನಿಕರು ಮಾಜಿ ಶಾಸಕ ಬಿ ಪಿ ಹರೀಶ್ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.ವೈದ್ಯರುಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದರೆ ಇಲ್ಲಿರುವ ಕೆಲಸ  ಮಾಡುವಂಥ ಸಿಬ್ಬಂದಿಗಳು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ  ಆಡಳಿತ ವೈದ್ಯಾಧಿಕಾರಿಗಳ ಮುಂದೆ ದೂರನ್ನು ನೀಡಿದರೆ ಅವರು  ಯಾವುದೇ ರೀತಿ ಸ್ಪಂದನೆ ತೋರದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ರಾತ್ರಿ ವೇಳೆ ತುರ್ತು ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯುವ ವೇಳೆ ತುರ್ತು ವಾಹನದ ಅಂಬುಲೆನ್ಸ್ ಗೆ ಡೀಸೆಲ್ ಇಲ್ಲ ಎಂದು ಸಬೂಬು ಹೇಳಿ ಸಾವ ನೋವಿನಲ್ಲಿರುವ ರೋಗಿಗಳನ್ನು ಸರಿಯಾದ ಸಮಯಕ್ಕೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಲ್ಲಿ ವಿಳಂಬ ಆಗುವುದರಿಂದ ರೋಗಿಗಳಿಗೆ ತುಂಬಾ ತೊಂದರೆಗಳು ಆಗುತ್ತಿವೆ ಸರಿಯಾದ ವ್ಯವಸ್ಥೆಯನ್ನು ಮಾಡದೆ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ವಾಗಿರುತ್ತದೆ ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಔಷಧಿ ಗುಳಿಗೆಗಳನ್ನು ಮತ್ತು ಬಾಣಂತಿಯರಿಗೆ ಉಪಾಹಾರದ  ವ್ಯವಸ್ಥೆ ಯನ್ನು ಇನ್ನಿತರೆ ಆಸ್ಪತ್ರೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವುದಕ್ಕೆ  ಮಾಜಿ ಶಾಸಕ ಬಿಪಿ ಹರೀಶ್ ರವರು ಮುಂದಾಗಬೇಕೆಂದು ಸಾರ್ವಜನಿಕ ಆಸ್ಪತ್ರೆಗೆ ಬಂದ ರೋಗಿಗಳು ಸಂಬಂಧಿಕರು ಸಾರ್ವಜನಿಕರು ದೂರಿದರು ಈ ವೇಳೆ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮನಾಯ್ಕ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಾದ ಶಾಂತರಾಜ್. ಮಂಜುನಾಥ ಅಗಡಿ.ಐರಣಿ ರಾಜು .ರೂಪಾ ಕಾಟ್ವೆ .ಆಟೂ ರಾಜು . ಬಿಜಿಪಿ ಮುಖಂಡ ಕಂಚನಳ್ಳಿ ಮಹಾಂತೇಶಪ್ಪ .ವಿನಾಯಕ ಆರಾಧ್ಯ .ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.