ಸಂಜೆವಾಣಿ ವಾರ್ತೆ
ಹರಿಹರ ಸೆ 21; ನಗರ, ಪಟ್ಟಣ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆ ಎಂದರೆ ಜನ ಮೂಗು ಮುರಿಯುತ್ತಾರೆ. ಅಲ್ಲಿ ಸರಿಯಾಗಿ ವೈದ್ಯರಿರುವುದಿಲ್ಲ, ಇದ್ದರೂ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ, ಉತ್ತಮ ಔಷಧ ವಿತರಿಸುವುದಿಲ್ಲ ಎಂಬಿತ್ಯಾದಿ ಕಾರಣಗಳಿಗೆ ಸರಕಾರಿ ಆಸ್ಪತ್ರೆಗಳಿಗೆ ಹೋಗಲು ಬಹುತೇಕರು ಹಿಂದೇಟು ಹಾಕುತ್ತಾರೆ.ಪ್ರತಿನಿತ್ಯವೂ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ನೂರಾರು ಜನ ಆಸ್ಪತ್ರೆಗೆ ಚಿಕಿತ್ಸೆಯಿಂದ ಬಂದರೆ ಪ್ರಮುಖ ವೈದ್ಯರಾದ ಮಕ್ಕಳ ತಜ್ಞರು, ಕಿವಿ ಮೂಗು ಗಂಟಲು. ನೇತ್ರದಂತ ಹೀಗೆ ಹಲವಾರು ತಜ್ಞರ ವೈದ್ಯರ ಕೊರತೆ ಇದ್ದು,ವೈದ್ಯರುಗಳು ಇಲ್ಲದೆ ನಾಗರೀಕರು ಪರದಾಡುವಂಥ ಪರಿಸ್ಥಿತಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದ್ದರು ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆಂದು ಎಂದು ಆಸ್ಪತ್ರೆಗೆ ಬರುವ ರೋಗಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಬರುವ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತು ತಪಾಸಣೆಗೊಳಗಾಗಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಆಸ್ಪತ್ರೆಯಲ್ಲಿರುವ ಬೆರಳಣಿಕೆಯಷ್ಟು ವೈದ್ಯರು ವಾರ್ಡ್‌ಗಳಲ್ಲಿ ದಾಖಲಾಗುವ ಒಳರೋಗಿಗಳನ್ನು ನೋಡಿ ಒಪಿಡಿಗೆ ಬರುವವರೆಗೂ ಹೊರ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಿದೆ. ನಾಗರೀಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣವಾಗಿದ್ದರೆ ಇಲ್ಲಿನ ವೈದ್ಯರುಗಳ ಕೊರತೆ ಇದ್ದರೂ ಸಹ ಸ್ಥಳೀಯ ಶಾಸಕರಾಗಲಿ ಸಂಬಂಧಿಸಿದ ಅಧಿಕಾರಿಗಳಾಗಲಿ ಗಮನ ಹರಿಸದೆ ಇರುವುದು ಇವರ ನಿರ್ಲಕ್ಷ ಎದ್ದು ತೋರುತ್ತಿದೆ. ಕಾಯಿಲೆ ಮನುಷ್ಯರಿಗೆ ಹೇಳಿ, ಕೇಳಿ ಬರುವುದಿಲ್ಲ. ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ವೈದ್ಯರಿದ್ದರೆ ಒಳಿತು, ಇಲ್ಲವಾದಲ್ಲಿ ರೋಗಿಯ ಪಾಡು ಹೇಳತೀರದು ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ಬಡ ಮತ್ತು ಮಧ್ಯಮ ವರ್ಗದವರಿಗೆ ಸಾರ್ವಜನಿಕ ಆಸ್ಪತ್ರೆಯ ಸೇವೆ ಅಗತ್ಯವಾಗಿರುತ್ತದೆ ಆದ್ದರಿಂದ ದಯಮಾಡಿ ಶಾಸಕರು ಅಧಿಕಾರಿಗಳು ಹರಿಹರ ಸಾರ್ವಜನಿಕ ಆಸ್ಪತ್ರೆಗೆ ತಜ್ಞ ವೈದ್ಯರ ಕೊರತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮುಂದಾದರೆ ಒಳಿತು ಇಲ್ಲವಾದಲ್ಲಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಇದಕ್ಕೆ ಅವಕಾಶ ಮಾಡಿಕೊಡದೆ ಕೂಡಲೇ ಕಿವಿ ಮೂಗು ಗಂಟಲು. ಮಕ್ಕಳ. ನೇತ್ರ ಸೇರಿದಂತೆ ವೈದ್ಯರುಗಳನ್ನು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ನಾಗರಿಕರು ಒತ್ತಾಯಿಸಿದರು.