ಸಾರ್ವಜನಿಕವಾಗಿ ಸೀರೆ ಹಂಚುತ್ತಿರುವುದನ್ನು ತಡೆದು ಪ್ರಕರಣ ದಾಖಲು

ಬೀದರ, ಮಾ. 28: ಮಾರ್ಚ 27 ರಂದು 12:30 ಗಂಟೆಗೆ ಶ್ರೀ ಪ್ರೇಮಸಿಂಗ ಜಿ ಪವಾರ ಸಹಾಯಕ ಚುಣಾವಣಾಧಿಕಾರಿಗಳು51 ಭಾಲ್ಕಿ ವಿಧಾನ ಸಭೆ ಕ್ಷೇತ್ರ ಅವರ ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆಂದರೆ ಇಂದು ಮಾರ್ಚ 27 ರಂದು ಸತ್ಯ ಸಾಯಿ ಶಾಲೆಯ ರಸ್ತೆ ಸಂಗಮೇಶ್ವ ಬಡವಾಣೆ ಹತ್ತಿರ ಕಂಗ್ರೇಸ್ ಪಕ್ಷದ ಕಾರ್ಯಕರ್ತರು.ಅನಧಿಕೃತವಾಗಿ ಶ್ರೀ ಈಶ್ವರ ಖಂಡ್ರೆ ಶಾಸಕರು ಭಾಲ್ಕಿ ಇವರ ಭಾವಚಿತ್ರ ಇವರ ಪ್ಲಾಸ್ಟಿಕ್ ಕವರಗಳಲ್ಲಿ ಸೀರೆಗಳು ಸಾರ್ವಜನಿಕರಿಗೆ ಹಂಚುತ್ತಿರು ಖಚಿತ ಮಾಹಿತಿ ಪಡೆದುಕೊಂಡು ನಾನು ಮತ್ತು ಶ್ರಿ ನಾಗಣ್ಣಾ, ಪರೀಟ ಮುಖ್ಯಾಧಿಕಾರಿಗಳು ಪುರಸಭೆ ಭಾಲ್ಕಿ ರವರೆಲ್ಲರು ಕೂಡಿಕೊಂಡು ಮೇಲ್ಕಂಡ ಸ್ಥಳಕ್ಕೆ 10 ಗಂಟೆಗೆ ಭೇಟಿ ಕೊಟ್ಟಾಗ ಅಲ್ಲಿ ಒಂದು ಇನೋವಾ ಕಾರ ನಂ ಕೆಎ39 ಎಂ2486 ನೇದರಲ್ಲಿ ಸಾರ್ವಜನಿಕರಿಗೆ ಸೀರೆ ಹಂಚುತ್ತಿರುವಾಗ ಅದನ್ನು ತಡೆದು ಪರಿಶಿಲಿಸಲಾಗಿದೆ ಅದರಲ್ಲಿ 3ರು ಬಿಳಿ ಬಣ್ಣದ ಚೀಲದಲ್ಲಿ ಸೀರೆಗಳು ಇದ್ದವು ಮತ್ತು 10 ಸೀರೆಗಳು ಖುಲ್ಲಾ ಇರುತ್ತವೆ.ಸದರಿ ಸ್ಥಳದಲ್ಲಿ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಸೀರೆಗಳು ಇದ್ದು ಇನೋವಾ ಕಾರ ಕೆಎ/39/ಎಂ/2486 ಕಾರು ಸಮೇತ ಪ್ರಕರನ ದಾಕಲಿಸಲು ಪೊಲೀಸರು ವಶಕ್ಕೆ ಕೊಟ್ಟು ಕಳುಹಿಸಿಕೊಟ್ಟದ್ದು ಇರುತ್ತದೆ ಆದ್ದರಿಂದ ಸದರಿ ವಿಷಯದ ಬಗ್ಗೆ ಕಾನೂನ ಕ್ರಮ ಜರುಗಿಸಲ್ಲು ಕೋರಿಕೊಂಡಿದ್ದು ಪರಿಶೀಲಿಸಿ ನೋಡಲಾಗಿ ಸದರಿ ಫಿರ್ಯಾದಿದಾರರ ದೂರಿನ ಅಸಂಜೆಯ ಸ್ವರೂಪವಾಗಿದ್ದರಿಂದ ನಾನು ಸದರಿ ಫಿರ್ಯಾದಿ ಸ್ವೀಕರಿಸಿಕೊಂಡು ಅಸಂಜೆಯ ಪ್ರಕರಣ ಕಾಲಂ-171 (ಈ ಐಪಿಸಿ ಅಡಿಯಲ್ಲಿ ಪ್ರಥಮ ವರ್ತಮಾನ ವರಧಿ ಖಲಿಸಲು ಮಾನ್ಯ ಸಿವಿಲ್ ನ್ಯಾಯಾಧೀಶರು [ಕಿ,ಶ್ರೇಣಿ] ಜೆ,ಎಂ,ಎಫ,ಸಿ ನ್ಯಾಯಲಯ ಭಾಲ್ಕಿ ಕೋರಿಕೆ ಪತ್ರ ಬರೆದು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸದರಿ ಫಿರ್ಯಾದಿ ಸ್ವೀಕರಿಸಿಕೊಂಡು ದೂರಿನ ಸಾರಾಂಶದ ಮೇರೆಗೆ ಇಂದು ಮಾಚ್ 27 ರಂದು 1:15 ಗಂಟೆಗೆ ಭಾಲ್ಕಿ ನಗರದ ಪೊಲೀಸ ಠಾಣೇ ಅಪರಾಧ ಸಂಖ್ಯೆ 46/20223ಕಲಂ:171[ಇ] ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ ಎಂದು ಭಾಲ್ಕಿಯ ಸಾಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.