ಸೇಡಂ,ಜೂ,13: ತಾಲೂಕಿನ ದುಗನೂರ ಗ್ರಾಪಂಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ ಆಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ನೀಲಕಂಠಪ್ಪ ಗೌಡ ಪೆÇೀಲಿಸ್ ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಳೆದು ಆರು ತಿಂಗಳಿನಿಂದ ಪಂಚಾಯಿತಿಯ ಮುಖ್ಯ ದ್ವಾರಕ್ಕೆ ಬೀಗ ಹಾಕುವ ಮೂಲಕ ಕಳ್ಳರಂತೆ ಹಿಂಬದಿಯಿಂದ ಬಂದು ಅಧಿಕಾರಿಗಳು ಜನಪ್ರತಿನಿಧಿಗಳು ತಮ್ಮ ಕೆಲಸಗಳನ್ನು ಮಾಡಿಕೊಂಡು ತೆರಳುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಿ ಮುಖ್ಯ ದ್ವಾರದ ಬಾಗಿಲು ತೆರೆದು ಸಾರ್ವಜನಿಕರ ಸಮಸ್ಯೆ ಅಧಿಕಾರಿಗಳು ಜನಪ್ರತಿನಿಧಿಗಳು ಆಲಿಸಲಿ ಎಂದು ಮನವಿ ಸಲ್ಲಿಸಲಾಯಿತು ಮುಖ್ಯದಾರ ತೆರೆಯುವಂತೆ ಆದೇಶವಿದ್ದರೂ ಇಂದಿಗೂ ಮುಖ್ಯದಾರ ತೆರೆಯುವುದು ಅಧಿಕಾರಿಗಳು ವಿಫಲರಾಗಿದ್ದಾರೆ ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯಿತಿಯ ಆವಣದಲ್ಲಿ ಗ್ರಾಮ ಪಂಚಾಯತಿಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತಾರೆ.