ಸಾರ್ವಜನಿಕರ ಸಮಸ್ಯೆಯನ್ನು ಅಧಿಕಾರಿಗಳು ಶೀಘ್ರವಾಗಿ ಪರಿಹರಿಸಬೇಕು: ಜಿ.ಟಿ.ದೇವೇಗೌಡ

ಮೈಸೂರು: ಮಾ.19:- ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದು ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಿಕೊಳ್ಳಿ. ಹಾಗೆಯೇ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಶೀಘ್ರವಾಗಿ ಪರಿಹರಿಸಬೇಕು ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ಇಲವಾಲ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿ ಸ್ವಿಕೃತವಾದ ಅರ್ಜಿಗಳನ್ನು ಅಧಿಕಾರಿಗಳು ಶೀಘ್ರವಾಗಿ ಪರಿಹರಿಸಬೇಕು. ವಾರಕ್ಕೆ ಒಂದು ದಿನ ಹೊಸಕೋಟೆ ಆಸ್ಪತ್ರೆ ಯಲ್ಲಿರುವ ವೈದ್ಯರು ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ಶಾಲಾ ಕಾಲೇಜು ಸಮಯದಲ್ಲಿ ಬಸ್ ಸಮಸ್ಯೆ ಇದ್ದು ನಿಗದಿತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ಆನಂದೂರಿನಲ್ಲಿ ಕಸ ವಿಲೇವಾರಿಗೆ ವಿದ್ಯುತ್ ವಿತರಣೆ, ಕೆಲವು ಬಡ ಜನರಿಗೆ ಮನೆ ಕಟ್ಟಲು ಗ್ರ್ಯಾoಟ್ ವ್ಯವಸ್ಥೆ, ರೈತರ ಜಮೀನಿನ ಸಮಸ್ಯೆಗಳು ಸೇರಿದಂತೆ ಮೊದಲಾದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವoತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ತಹಶೀಲ್ದಾರರಾದ ಗಿರೀಶ್ ಅವರು ಮಾತನಾಡಿ 18 ವರ್ಷ ತುಂಬಿದವರು ಕೂಡಲೇ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳಿ ಹಾಗೂ ವೋಟರ್ ಐಡಿ ತಿದ್ದುಪಡಿಯಿದ್ದಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು. ಇನ್ನಿತರೆ ವೋಟರ್ ಐಡಿ ಕಾರ್ಡಿಗೆ ಸಂಬoಧಿಸಿದ ಮಾಹಿತಿ ಬೇಕಾದಲ್ಲಿ ವೋಟರ್ ಹೆಲ್ಪ್ ಲೈನ್ ಆದ ಟೋಲ್ ಫ್ರೀ ನಂಬರ್ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ ಎಂದರು.
ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಜನರು ನಗರ ಜೀವನಕ್ಕೆ ಮಾರುಹೋಗುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಹಳ್ಳಿಯ ಜೀವನವೇ ಸುಖಕರವಾಗಿಯೂ ಹಾಗೂ ನೆಮ್ಮದಿಯುತವಾಗಿಯೂ ಇದೆ. ಪ್ರತಿಯೊಬ್ಬ ಮನುಷ್ಯನು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಮಾನವೀಯತೆ ಇಲ್ಲದ ಬದುಕು ವ್ಯರ್ಥ ಎಂದು ಹೇಳಿದರು.
ಮಕ್ಕಳಿಗೆ ಅತಿಯಾದ ಪ್ರೀತಿ ತೋರಿಸದೆ ಅವರನ್ನು ಸುಶಿಕ್ಷಿತ ನಾಗರಿಕರನ್ನಾಗಿ ಮಾಡುವ ಹೊಣೆ ಪೆÇೀಷಕರದ್ದಾಗಿರುತ್ತದೆ. ಸಾಮಾಜಿಕ ಜಾಲ ತಾಣಗಳನ್ನು ಧನಾತ್ಮಕವಾಗಿ ಬಳಸಬೇಕು. ಮಕ್ಕಳಿಗೆ ಮೊಬೈಲ್ ನೀಡಬೇಡಿ. ಸರ್ಕಾರದ ವಿವಿಧ ಸೌಲಭ್ಯಗಳ ಕುರಿತ ಮಾಹಿತಿ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಯಾವುದೇ ಮಧ್ಯವರ್ತಿಯ ಬಳಿ ಹೋಗದೆ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ, ಭೂ ಒತ್ತುವರಿ ಸಮಸ್ಯೆ, ಬೀದಿ ದೀಪದ ಸಮಸ್ಯೆ, ಸಾಗುವಳಿ ಚೀಟಿ ನೀಡುವ ಬಗ್ಗೆ, ಜಮೀನು ದುರಸ್ಥಿ, ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಮನವಿ, ಮನೆ ಖಾತೆ ಮಾಡಿಕೊಡುವಂತೆ ಮನವಿ, ಜಮೀನಿಗೆ ಹೋಗುವ ದಾರಿ ಬಿಡಿಸುವಂತೆ ಸಾರ್ವಜನಿಕರು ಮನವಿ ಅರ್ಜಿಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಭೂ ಮಾಪನ ಇಲಾಖೆಯ ಉಪ ನಿರ್ದೇಶಕರಾದ ಮೇಘನಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಿರೀಶ್, ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮದ ಜನರು ಭಾಗವಹಿಸಿದ್ದರು.