ಸಾರ್ವಜನಿಕರ ಕಣ ಖಾಸಗಿಯವರ ಪಾಲು:ರೈತರ ಆರೋಪ

ಮಧುಗಿರಿ, ಮಾ. ೪- ಗ್ರಾಮ ಪಂಚಾಯ್ತಿಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕರ ಕಣಗಳನ್ನು ಮಾಡಿದ್ದು ಸಾರ್ವಜನಿಕ ಒಕ್ಕಣಿ ಕಣ ಖಾಸಗಿಯವರ ಪಾಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ ೧೮೩ ರಲ್ಲಿ ೧೦.೧೩ ಗುಂಟೆಯಲ್ಲಿ ೩೦ ಗುಂಟೆ ಖರಾಬಿನಲ್ಲಿ ೨೦೧೯ ರಲ್ಲಿ ಗ್ರಾಮ ಪಂಚಾಯಿತಿ ರಾಮಕೃಷ್ಣರೆಡ್ಡಿ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾರ್ವಜಿಕ ಒಕ್ಕಣಿ ಕಣವನ್ನು ಎಂ.ಜಿ.ಎನ್.ಆರ್.ಇ.ಜಿ ಯೋಜನೆಯಡಿ ಕಣ ನಿರ್ಮಾಣ ಮಾಡಿದ್ದು ಇದು ಸಾರ್ವಜನಿಕರು ಬಳಸುತ್ತಿದ್ದರು. ಆದರೆ ಏಕಾಏಕಿ ಜಮಿನಿನ ಮಾಲೀಕರಾದ ಸಿದ್ದಮ್ಮ ಮತ್ತು ಅವರ ಮಗ ಅಶ್ವತ್ಥ್‌ರೆಡ್ಡಿ ಸುಮಾರು ೧೫ ಎಕರೆ ಭೂಮಿ ಇದ್ದು ಸರ್ಕಾರಿ ಸೌಲಭ್ಯಗಳ ಪಡೆದಿದಿದಪ, ಕಣವನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ. ಕಣದಲ್ಲಿ ಹುಲ್ಲು ಬಣವೆಯನ್ನು ಹಾಕಿ ದಾರಿ ಬಿಡದೆ ತೊಂದರೆ ಮಾಡುತ್ತಿದ್ದಾರೆ ಎಂದು ಗೌರೆಡಿ ಪಾಳ್ಯಾದ ಗ್ರಾಮಸ್ಥರ ಅರೋಪಿಸಿದರು.
ಸ್ಥಳಕ್ಕೆ ಪಿಡಿಓ ಸತ್ಯನಾರಾಯಣ, ಕಾರ್ಯದರ್ಶಿ ಗೋಪಾಲ್ ಹಾಗೂ ಗ್ರಾ.ಪಂ. ಸದಸ್ಯರ ಮೇಲೆ ಮಾಲೀಕರು ಮುಗಿಬಿದ್ದರು ತಕ್ಷಣ ಮಧ್ಯ ಪ್ರವೇಶಿಸಿದ ಮಾ.ಜಿ ಗ್ರಾ.ಪಂ ಅಧ್ಯಕ್ಷ ಮುಕ್ತಿಯಾರ್ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಸರ್ಕಾರ ಸರ್ಕಾರಿ ಜಾಗದಲ್ಲಿ ಹಾಗೂ ಖರಾಬ್ ಸ್ಥಳದಲ್ಲಿ ಕಣಗಳನ್ನು ನಿರ್ಮಾಣ ಮಾಡಿದ್ದು ಇವುಗಳನ್ನು ಸಾರ್ವಜನಿಕರ ಸದ್ಬಳಕೆ ಮಾತ್ರ ಸೀಮಿತ ಎಂದು ಮಾಲಿಕರಿಗೆ ಮನವರಿಕೆ ಮಾಡಿದರು.
ಗ್ರಾ.ಪಂ ಸದಸ್ಯ ಕೆ.ಎಂ. ರಾಜೇಶ್ ಹಾಗೂ ರೈತರು ಸಹಬಾಳ್ವೆಯಿಂದ ಇರಬೇಕು. ಸಾರ್ವಜನಿಕರ ಉಪಯೋಗಕ್ಕೆ ನಿಮಾರ್ಣ ಮಾಡಿರುವ ಕಣ ಸಾರ್ವಜನಿಕರದ್ದಾಗಿದೆ. ತಕ್ಷಣ ಸುತ್ತ ಮುತ್ತಲಿನ ರೈತರಿಗೆ ಖರಾಬಿನಲ್ಲಿ ಇರುವ ದಾರಿಯನ್ನು ಯಥಾವತ್ತಾಗಿ ಬಿಟ್ಟು ಕಣವನ್ನು ಸಂರಕ್ಷಣೆ ಮಾಡಬೇಕು. ಯಾವುದೇ ರೀತಿ ಕಣಕ್ಕೆ ಹಾನಿ ಆದಲ್ಲಿ ತಾವೇ ಹೊಣೆಗಾರರಾಗಬೇಕಾಗುತ್ತಿದೆ ಎಂದು ಮಾಲಿಕರಿಗೆ ತಿಳಿಸಿದರು.
ಗ್ರಾ.ಪಂ ಮಾಜಿ ಸದಸ್ಯ ಮೈಲಾರಪ್ಪ ಸಾರ್ವಜನಿಕ ಕಣಗಳು ಸರ್ಕಾರಿ ಆಸ್ತಿಯಾಗಿದ್ದು ಇವುಗಳನ್ನು ಒತ್ತುವರಿ ಮಾಡುವುದಾಗಲಿ ಸಾರ್ವಜನಿಕರಿಗೆ ತೊಂದರೆ ಮಾಡುವ ಆಗಿಲ್ಲಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತರಕಾರಿ ರಾಜಪ್ಪ, ಶಶಿಕುಮಾರ್, ಶಂಕರೆಡ್ಡಿ, ನರೇಶ್, ಓಬರೆಡ್ಡಿ, ನರಸರೆಡ್ಡಿ, ಶಿವರಾಮರೆಡ್ಡಿ, ಕೆ.ಸಿ ರಾಮರೆಡ್ಡಿ, ಶ್ರೀಧರ್, ನಾರಾಯಣರೆಡ್ಡಿ, ಲಕ್ಷ್ಮೀಶ್‌ರೆಡ್ಡಿ ಉಪಸ್ಥಿತರಿದ್ದರು.