ಸಾರ್ವಜನಿಕರ ಆಶಾಭಾವನೆಗೆ ಸ್ಪಂದಿಸಿ : ವಾಸುದೇವ ರಾಮ್ 

ಹಿರಿಯೂರು  : ಏ. 13-ಸಾರ್ವಜನಿಕರು ಆಶಾಭಾವನೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಭರವಸೆಯಿಂದ ಕಚೇರಿಗಳಿಗೆ ಬರುತ್ತಾರೆ, ನಿಮ್ಮ ನಿಮ್ಮ ಹಂತಗಳಲ್ಲಿ ಸಾರ್ವಜನಿಕರಿಗೆ ಸಹಕಾರ ವಾಗುವಂತೆ ಸ್ಪಂದಿಸಿ ಕಾನೂನು ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು  ಚಿತ್ರದುರ್ಗ  ಲೋಕಾಯುಕ್ತ ಅಧೀಕ್ಷಕರಾದ ಎನ್ ವಾಸುದೇವ ರಾಮ್ ಹೇಳಿದರು. ಹಿರಿಯೂರಿನಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ, ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ತೊಂದರೆಗಳೆನಾದರೂ ಇದ್ದಲ್ಲಿ ನಮಗೆ ತಿಳಿಸಿದ್ದಲ್ಲಿ ನಾವುಗಳು ಸೂಕ್ತ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಚಿತ್ರದುರ್ಗದ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ರವರು ಮಾತನಾಡಿ ವಿವಿಧ ಕಾಯ್ದೆಗಳ ಬಗ್ಗೆ ಮತ್ತು ಸಾರ್ವಜನಿಕ ವಲಯದ ಕಾನೂನು ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಚಿತ್ರದುರ್ಗ ಲೋಕಾಯುಕ್ತ  ಪೊಲೀಸ್ ನಿರೀಕ್ಷಕರಾದ ಆರ್ ವಸಂತಕುಮಾರ್, ಬಿ ಕೆ ಲತಾ, ವೈ ಎಸ್ ಶಿಲ್ಪಾ ಹಾಗೂ ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.