ಸಾರ್ವಜನಿಕರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆರಕ್ಷಕರು.

ಹರಿಹರ.ಏ.೨೮; ರಾಜ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಾಗೂ ಕೊರೊನಾ ಹಬ್ಬುವುದನ್ನು ತಪ್ಪಿಸಲು ಇಂದು ಮುಂಜಾನೆಯಿಂದಲೇ ಹರಿಹರದ ಸರ್ಕಲ್ ಪೋಲೀಸ್ ಠಾಣೆ ಆರಕ್ಷಕರು ಶ್ರಮಿಸುತ್ತಿದ್ದಾರೆ  ತುಂಗಭದ್ರ ನದಿ ತೀರದಲ್ಲಿ ನಾಕಾ ಬಂದಿ ಹಾಕಿರುವ ಹರಿಹರದ ಆರಕ್ಷಕ ಠಾಣಾ ಸಿಬ್ಬಂದಿಯವರಾದ .ರವಿ ಬಿ.ಬಿ ಹಾಗೂ ಗುಡ್ಧೇಶ ಎಚ್ ಬಿ. ಹರಿಹರದ ಮುಖ್ಯ ವೃತ್ತದಲ್ಲಿ ಠಾಣಾ ನೀರಿಕ್ಷಕರಾದ ಸುನೀಲ ಬಸವರಾಜ ತೇಲಿ ಮತ್ತು ಅಪರಾಧ ವಿಭಾಗದ ಲತಾ ತಾಳೇಕರ್ ರವರ ನೇತೃತ್ವದಲ್ಲಿ ಹರಿಹರದ ಶಹರ ಠಾಣೆ ಸಿಬ್ಬಂದಿ ತಡೆನೀಡಿ ಬರುವ ವಾಹನಗಳ ತಪಾಸಣೆ ಮಾಡುತ್ತಿರುವ ಎ ಸ್ ಐ ರವರಾದ ಅಣ್ಣೋಜಿರಾವ್, ನಾಗರಾಜ ,ಮಲ್ಲೇಶಪ್ಪ ಸಿಬ್ಬಂದಿಯವರಾದ ಕರಿಯಪ್ಪ,ಶಿವಪದ್ಮ, ಕುಬೇರನಾಯಕ್, ರವರು ಸಾರ್ವಜನಿಕರಲ್ಲಿ ಮಾಸ್ಕ್ ಧರಿಸಿರಿ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕರು ಅನಗತ್ಯವಾಗಿ ಓಡಾಡಿವದನ್ನು ತಪ್ಪಿಸಿ ಕೋರೊನಾ ಹರಡುವದನ್ನು ತಪ್ಪಿಸಲು ಬಿಸಿಲುಬೆಗೆ ಎನ್ನದೇ ಶ್ರಮಿಸುತ್ತಿರುವದು ಶ್ಲಾಘನೀಯ. ಇನ್ನಾದರು ಸಾರ್ವಜನಿಕರು ಅನಗತ್ಯವಾಗಿ ಓಡಾಡದೇ ನಿರ್ಧಿಷ್ಠಪಡಿಸಿದ ಸಮಯದಲ್ಲೇ ತಮ್ಮ ಅಗತ್ಯದ ವಸ್ತುಗಳನ್ನು ತೆಗೆದುಕೊಂಡು ಮನೆಯಲ್ಲೆ ಉಳಿದಲ್ಲಿ ಆರಕ್ಷಕರ ಶ್ರಮ ಸಾರ್ಥಕ.  ಇಂದು ಕೊವಿಡ್ ನಿಂದಾಗಿ ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಠಾಣಾ ಸಿಬ್ಬಂದಿಗಳಿಗೆ ಅವರ ನಿಸ್ವಾರ್ಥ ಸೇವೆ ಮನಗಂಡು ಸರಕಾರ ಅವರ ಭತ್ತೆಯನ್ನಾಗಲಿ ತಿಂಗಳ ವೇತನವನ್ನಾದರೂ ಹೆಚ್ಚಿಸಲಿ ಎಂದು ಈ ಸಮಯದಲ್ಲಿ ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಡಾ. ಜಿ ಜೆ ಮೆಹೆಂದಳೆಯವರು ಸರಕಾರವನ್ನು ಆಗ್ರಹಡಿಸುತ್ತಿದ್ದಾರೆ.