ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಎಸ್‍ಪಿ

ಅಫಜಲಪುರ ಮೇ. 22: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೆÇಲೀಸ ಅಧೀಕ್ಷಕ
ಜಾನ್ ಆಂಟೋನಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಅಫಜಲಪುರ ತಾಲೂಕಿನ ನೀರಿನ ಸಮಸ್ಯೆ, ರಾಸಾಯನಿಕ ನೀರು ಜಮೀನುಗಳಿಗೆ ಹರಿದು ಬರುವದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಎಸ್ಪಿ ಅವರ ಮುಂದೆ ಅಹವಾಲು ತೋಡಿಕೊಂಡರು.
ಎಸ್‍ಪಿ ಜಾನ್ ಆಂಟೋನಿ ಅವರು ಜನರ ಸಮಸ್ಯೆ ಏನೇ ಇದ್ದರೂ ಸರಿಯಾಗಿ ಸ್ಪಂದನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.ನೀರಿನ ಸಮಸ್ಯೆಗೆ ನೀವು ಏಕೆ ಸ್ಪಂದನೆ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ್,ಪೆÇಲೀಸ್ ನಿರೀಕ್ಷಕ ರಾಜಶೇಖರ್ ಹಳಿಗೋಧಿ,ತಹಶೀಲ್ದಾರ ಸಂಜು ಕುಮಾರ್, ಉಪ ತಹಶೀಲ್ದಾರ ಶರಣಬಸವ, ಬಸವರಾಜ್,ಪ್ರದೀಪ್, ಶರಣು ಮತ್ತು ಸಿಬ್ಬಂದಿಗಳು ಇದ್ದರು.