ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು


ಬಳ್ಳಾರಿ, ಆ.06- ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ತಮ್ಮ ಸ್ವ ಗೃಹದ ಕಚೇರಿಯಲ್ಲಿ ಶುಕ್ರವಾರ ಜನತಾದರ್ಶನ ನಡೆಸಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ವಿವಿಧೆಡೆಯಿಂದ ಆಗಮಿಸಿದ್ದ ಜನರು ತಮ್ಮ ಅಹವಾಲುಗಳನ್ನು ಹಾಗೂ ಕುಂದು-ಕೊರತೆಗಳನ್ನು ತೊಡಿಕೊಂಡರು. ಜನರ ಅಹವಾಲುಗಳನ್ನು ಅತ್ಯಂತ ಸಂಯಮದಿಂದ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸಚಿವರು ಬಗೆಹರಿಸಿದರು.
ಇದೇ ವೇಳೆ ಬಳ್ಳಾರಿ ನಗರದ ಮಾರುಕಟ್ಟೆ ಬೀದಿ ವ್ಯಾಪಾರಸ್ಥರು ಜೊತೆಗೂ ಮಾತುಕತೆ ನಡೆಸಿ ಅವರ ಸಮಸ್ಯೆಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹಾಗೂ ಇನ್ನಿತರರು ಇದ್ದರು.