
ಬೀದರ್: ಮಾ.30:ಸಾರ್ವಜನಿಕರು ತಮ್ಮ ಕಛೇರಿಗೆ ಬಂದು ತಮ್ಮ ಮನವಿ ಪತ್ರ ಸಲ್ಲಿಸಿದಾಗ ಅವರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಅಥವಾ ಸಕಾಲದ ಅಡಿಯಲ್ಲಿ ಸಾರ್ವಜನಿಕ ಕೆಲಸ ಮಾಡಿಕೊಡುವದು ಆದ್ಯ ಕರ್ತವ್ಯವೆಂದು ಕರ್ನಾಟಕ ಲೋಕಾಯುಕ್ತ ಬೀದರನ ಪೊಲೀಸ್ ಉಪಾಧೀಕ್ಷಕರಾದ ಎನ್.ಎಮ್ ಓಲೇಕಾರ ಅವರು ಹೇಳಿದರು.
ಬುಧುವಾರ ಬೀದರ ನಗರದ ತಹಶೀಲ್ದಾರರ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೋರತೆಗಳು ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನಾವಶ್ಯಕವಾಗಿ ಕೆಲಸವನ್ನು ತಡೆ ಹಿಡಿವುದು ಕಾನೂನುಬಾಹಿರ ಹಾಗೂ ಇದೊಂದು ಭ್ರಷ್ಟಾಚಾರ ಮಾಡಿದ ಹಾಗೆ, ಅಲ್ಲದೆ ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಯಾವುದೇ ಕಛೇರಿಗೆ ಭೇಟಿ ನೀಡಿ ದೈನಂದಿನ ಕಡತಗಳು ಪರಿಶೀಲನೆ ಮಾಡಬಹುದು. ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕೇಂದ್ರ ಸ್ಥಾನದಲ್ಲಿ ವಾಸಿಸುವಂತೆ ಸೂಚಿಸಿದರು.
ಸಾರ್ವಜನಿಕರು ಸಲ್ಲಿಸಿದ ದೂರಗಳನ್ನು ಸ್ವೀಕರಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಕಾನೂನಿನ ಅಡಿಯಲ್ಲಿ ಹಾಗೂ ಸಕಾಲದ ಅಡಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ್ದರು.
ಕಾರ್ಯಕ್ರಮದಲ್ಲಿ ತಾಲುಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ್‍ರಾವ್ ಪಾಟೀಲ್, ತಹಶೀಲ್ದಾರರಾದ ದೀಲಶಾದ ಮಹಾತ, ಪೊಲೀಸ್ ನೀರಿಕ್ಷಕರಾದ ಪ್ರದೀಪ ಕೋಳ್ಳಾ, ವಾಹೀದ ಹುಸೇನ್ ಕೊತ್ವಾಲ, ಸಿಬ್ಬಂದಿಯವರಾದ ವಿಜಯಶೇಖರ, ಅಡೆಪ್ಪಾ ಬಿರಾದಾರ, ಹಾತಿಸಿಂಗ ಸೇರಿದಂತೆ ಇನ್ನಿತರರು ಉಪಸ್ಥಿತರಿರದ್ದರು.