ಸಾರ್ವಜನಿಕರು ಸಂಕೋಚ ಬಿಟ್ಟು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ

ಹರಪನಹಳ್ಳಿ.ಮೇ,೨೦; ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಿಬ್ಬಂದಿಗಳಿಂದ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುತ್ತಿದ್ದರೆ. ಯಾರಿಗೆ ಜ್ವರ, ಶೀತ, ನೇಗಡಿ, ಕೆಮ್ಮು, ಮೈಕೈಯಿ ನೋವು ಸೇರಿದಂತೆ ಅನೇಕ ಕಾಯಿಲೆಗೆ ಮೆಡಿಷಿನ್ ಕಿಟ್ ನ್ನು ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಉಪವಿಭಾಗಧಿಕಾರಿ ಚಂದ್ರಶೇಖರ್ ಎಚ್.ಜಿ. ಹೇಳಿದರು.ಅವರು ಪತ್ರಿಕೆ ಹೇಳಿಕೆಗೆ ಮಾಹಿತಿ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಮಗೆ ಸರಿಯಾದ ಮಾಹಿತಿ ಸೀಗುತ್ತಿದೆ. ಔಷಧಿ ಕೂಡ ನೀಡಲಾಗುತ್ತಿದೆ. ಪಟ್ಟಣದಲ್ಲಿ ಸಾರ್ವಜನಿಕರು ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಸ್ಥಳದಲ್ಲಿಯೇ ಮಾತ್ರೆಗಳನ್ನು ನೀಡುತ್ತಿದ್ದೇವೆ, ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೋರೊನಾ ಲಕ್ಷಣ ಕಡಿಮೆ ಆಗುತ್ತಾ ಹೋಗುತ್ತದೆ ಎಂದರು.ಸರ್ಕಾರದಿಂದ ಆರೋಗ್ಯ ಇಲಾಖೆಯವರು ಈ ಕಾಯಿಲೆಗೆ ಆರಂಭದಲ್ಲೆ ಮೆಡಿಷಿನ್ ನೀಡುತ್ತಿದ್ದು, ಎರಡು ಮೂರು ದಿನ ಜ್ವರ, ಸೀತ, ನೇಗಡಿ, ಕೆಮ್ಮು, ಮೈಕೈಯಿ ನೋವು ಮುಂದುವರೆದರೆ ಅವರಿಗೆ ಕೋವಿಡ್ ಟೆಷ್ಟ್ ಮಾಡಿಸುತ್ತೇವೆ. ಸಾರ್ವಜನಿಕರು ಸಹಕಾರ ನೀಡಬೇಕು. ನಗರ ಪ್ರದೇಶದಲ್ಲಿ ಕೆಲವರು ನಮಗೆ ಏನೂ ಸೀಂಟೆಮ್ಸ್ ಇಲ್ಲ ಆರಾಮಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾರು ಸಂಕೋಚ ಇಟ್ಟುಕೊಳ್ಳದೇ ಟೆಸ್ಟ್ ಮಾಡಿಸಿಕೊಳ್ಳಬೇಕು. ನಾವು ಸ್ಥಳದಲ್ಲಿಯೇ ಟೆಸ್ಟ್ ಮಾಡಲು ವ್ಯವಸ್ಥೆ ಮಾಡುತ್ತೇವೆ ಮುಚ್ಚಿಟ್ಟ ಕೊಂಡರೆ ಅವರಿಗೆ ಮುಂದೆ ಬೆಡ್, ಆಕ್ಸೀಜನ್ ವೆಂಟಿಲೇಟರ್ ಸಿಗುವುದು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತೆ ಕ್ರಮವಾಗಿ ಯಾವುದೇ ಭಯ ಬಿಟ್ಟು ಸಮಸ್ಯೆ ಹೇಳಿಕೊಳ್ಳಿ. ನಮ್ಮ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆದು ಪತ್ರಿಕೆ ಹೇಳಿಕೆಯಲ್ಲಿ ತಾಲೂಕು ಉಪ ವಿಭಾಗಧಿಕಾರಿ ಚಂದ್ರಶೇಖರ್.ಎಚ್.ಜಿ. ತಿಳಿಸಿದ್ದಾರೆ.