ಸಾರ್ವಜನಿಕರು ಮೋಸ-ನಷ್ಟದ ಬಗ್ಗೆ ಪ್ರಶ್ನಿಸಬೇಕು

ಕೆ.ಆರ್.ಪೇಟೆ:ಏ:01: ಜನಸಾಮಾನ್ಯರಿಗೆ ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹಾಗೂ ಮೋಸ ಆಗುತ್ತಿದ್ದು ಇವುಗಳನ್ನು ಸಾರ್ವಜನಿಕರು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಾಗಬೇಕು ಎಂದು ಕಿರಿಯ ನ್ಯಾಯಾಧೀಶರಾದ ಬಸವರಾಜ ತುಳಸಪ್ಪ ನಾಯಕ ಮನವಿ ಮಾಡಿದರು.
ಪಟ್ಟಣದ ಪುರಸಭಾ ಕಛೇರಿಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ್ಲ ವಿಶ್ವ ಗ್ರಾಹಕರ ದಿನ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಗ್ರಾಹಕರ ಹಕ್ಕು ಕಾಯಿದೆಯ ಮೂಲಕ ಗ್ರಾಹಕರು ತಾವು ಖರೀದಿಸಿದ ವಸ್ತುಗಳು ಗುಣ ಮಟ್ಟದಿಂದ ಕೂಡಿಲ್ಲ ಎಂಬ ಖಚಿತತೆ ಇದ್ದರೆ ಅಂಥಹ ವಸ್ತುಗಳನ್ನು ವಾಪಸ್ ಮಾಡುವ ಅವಕಾಶವಿದೆ. ಒಂದು ವೇಳೆÉ ಅಂಗಡಿಯ ಮಾಲೀಕ ಅದನ್ನು ನಿರಾಕರಿಸಿದರೆ ಅವರ ಮೇಲೆ ನ್ಯಾಯಾಲಯದಲ್ಲಿ ಕಾನೂನಿನ ರೀತಿಯ ಕ್ರಮ ಕೈಗೊಳ್ಳಬಹುದಾಗಿದೆ. ಗ್ರಾಹಕರಿಗೆ ನೀಡುವ ಪರಿಹಾರದ ಹಣದಲ್ಲಿಯೂ ಏರಿಕೆಯಾಗಿದ್ದು ಇದರ ಬಗ್ಗೆ ಸಾರ್ವಜನಿಕರು ಮಾಹಿತಿ ಹೊಂದು ವುದು ಅವಶ್ಯಕವಾಗಿದೆ.
ಸಂವಿಧಾನದ ಪ್ರಕಾರ ಎಲ್ಲರೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಅವರುಗಳಿಗೆ ಸೂಕ್ತವಾದ ಮಾರ್ಗಗಳ ಕೊರತೆ ಇರುತ್ತದೆ.
ಬಡತನ, ಶಿಕ್ಷಣದ ಕೊರತೆ, ಆರ್ಥಿಕ ಸಮಾನತೆ ಸಮಸ್ಯೆ ಮುಂತಾದುವುಗಳಿಂದಾಗಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುμÁ್ಠನ ಆಗುವಲ್ಲಿ ವಿಳಂಬವಾಗುತ್ತಿವೆ. ಇವುಗ ಳನ್ನು ಸರಿಪಡಿಸುವ ಕೆಲಸವನ್ನು ಎಲ್ಲರೂ ಮಾಡ ಬೇಕಾಗಿದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾದ್ಯಕ್ಷ ಇಂದ್ರಕುಮಾರ್, ಕಾರ್ಯದರ್ಶಿ ಡಿ.ಆರ್.ಮೋಹನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಎಪಿಪಿ ರಾಜೇಶ್, ಪಿ.ಚೇತನ್, ವಕೀಲರಾದ ಆಶಾ, ಉದ್ಯಮಿ ಕೆ.ಎಸ್.ರಾಜೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿಗ ವೈದ್ಯಾಧಿಕಾರಿ ಡಾ.ಜಯಂತ್, ಪುರಸಭಾ ಸದಸ್ಯ ಶಾಮಿಯಾನ ತಿಮ್ಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.