ಸಾರ್ವಜನಿಕರು ದೂರವಾಣಿ, ಫೇಸ್‍ಬುಕ್, ಟ್ವಿಟರ್ ಖಾತೆಗಳಮೂಲಕ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶ

ಕಲಬುರಗಿ.ಆ.03:ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ಕುಂದುಕೊರತೆ, ದೂರುಗಳು ಇದ್ದಲ್ಲಿ ಕೆಳಕಂಡ ದೂರವಾಣಿ, ಮೊಬೈಲ್ ಸಂಖ್ಯೆ, ಟ್ವಿಟರ್ ಖಾತೆ ಹಾಗೂ ಫೇಸ್‍ಬುಕ್ ಮೂಲಕ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮೊಬೈಲ್ ಸಂಖ್ಯೆ 6363544601, ದೂರವಾಣಿ ಸಂಖ್ಯೆ 08472-241364 (24*7), ಟ್ವಿಟರ್ ಖಾತೆ @Kalaburgicorp, ಫೇಸ್‍ಬುಕ್: ಕಲಬುರಗಿ ಮಹಾನಗರ ಪಾಲಿಕೆ/ kalaburgi mahanagar palike ಗೆ ಸಂಪರ್ಕಿಸಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.