ಸಾರ್ವಜನಿಕರು ಕಟ್ಟಡ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಸೂಚನೆ

ಕಲಬುರಗಿ,ನ.23:ಕಲಬುರಗಿ ನಗರದ ಸಾರ್ವಜನಿಕರು ನಗರದ ರಸ್ತೆಗಳ ಬದಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಬಿಸಾಕುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ಅಥವಾ ಕಟ್ಟಡದ ಮಾಲೀಕರು ಈ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಕದೇ ಸೂಕ್ತವಾಗಿ ವಿಲೇವಾರಿ ಮಾಡಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಅವರು ತಿಳಿಸಿದ್ದಾರೆ.
ಕಲಬುರಗಿ ನಗರವು ದಿನೇ-ದಿನೇ ಬೆಳೆಯುತ್ತಿದ್ದು, ವಾಣಿಜ್ಯ ಮತ್ತು ವಸತಿ ಕಟ್ಟಡಗಳ ನಿರ್ಮಾಣ ಕಾರ್ಯವು ಕ್ಷೀಪ್ರವಾಗಿ ನಡೆಯುತ್ತಿದೆ. ಸಾರ್ವಜನಿಕರು ಕಟ್ಟಡ ನಿರ್ಮಾಣ ಹಾಗೂ ಹಳೆ ಕಟ್ಟಡ ನೆಲಸಮಗೊಳಿಸಿದ ಕಟ್ಟಡಗಳ ತ್ಯಾಜ್ಯವು ಅಲ್ಲಲ್ಲಿ ಬಿಸಾಕುತ್ತಿದ್ದು, ಇದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು.
ಒಂದು ವೇಳೆ ನಗರದ ಯಾವುದಾದರು ಸ್ಥಳ/ಪ್ರದೇಶದಲ್ಲಿ ಕಟ್ಟಡ ಅಥವಾ ನೆಲಸಮಗೊಳಿಸಿದ ತ್ಯಾಜ್ಯ (ಸಿ ಆ್ಯಂಡ್ ಡಿ ವೆಸ್ಟ್) ವನ್ನು ಕಂಡು ಬಂದಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ವಿಲೇಗೊಳಿಸಲು ಕಲಬುರಗಿ ಮಹಾನಗರ ಪಾಲಿಕೆಯ ಸೂಪರ್‍ವೈಸರ್ (ಹೊರಗುತ್ತಿಗೆ) ಕಮಲ್ ಇವರ ಮೊಬೈಲ್ ಸಂಖ್ಯೆ 8123123439ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.