ಸಾರ್ವಜನಿಕರು ಅವಶ್ಯಕತೆಗನುಣವಾಗಿ ನೀರು ಸಂಗ್ರಹಿಸಿಕೊಂಡು ಮಿತವಾಗಿ ಬಳಸಲು ಸೂಚನೆ

ಕಲಬುರಗಿ,ಜೂ.6:ಶೋರಗುಂಬಜ್ ಹಾಗೂ ಕೊಟನೂರು ನೀರು ಶುದ್ಧಿüಕರಣ ಘಟಕದಿಂದ ನೀರು ಸರಬರಾಜು ಮಾಡುವ ಪ್ರದೇಶಗಳಲ್ಲಿ ಅವಶ್ಯಕತೆ ಅನುಗುಣವಾಗಿ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಆದ್ದರಿಂದ ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಿ, ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಸಂಗ್ರಹಿಸಿಕೊಂಡು ಮಿತವಾಗಿ ಬಳಸಬೇಕೆಂದು ಕಲಬುರಗಿ ಕೆಸೆಂಪು-ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ 3 ಜಲ ಮೂಲಗಳಲ್ಲಿ ಒಂದಾದ ಸರಡಗಿಯ ಭೀಮಾ ನದಿಯ ಬ್ಯಾರೇಜಿನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಸಕಾಲದಲ್ಲಿ ಮಳೆಯಾಗದೇ ಇರುವುದು ಹಾಗೂ ನಾರಾಯಣಪುರ ಮುಖ್ಯ ಕಾಲುವೆಯಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ನಗರದ ಸಾರ್ವಜನಿಕರು, ಕಲಬುರಗಿ ಮಹಾನಗರ ಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.