ಸಾರ್ವಜನಿಕರಿಗೆ ಹೆಚ್ಚಿನ ಸಹಾಯ ಸಿಗಲಿ  

ಹಿರಿಯೂರು ಜ: 21- ಮಣಿಪುರಂ ಗೋಲ್ಡ್ ಕಂಪನಿ ವತಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸಹಾಯ ಸಿಗಲಿ ಎಂದು ಮಾಜಿ ಸಚಿವರಾದ ಡಿ. ಸುಧಾಕರ್ ಹೇಳಿದರು ಹಾಗೂ ಕಂಪನಿಯ ಪ್ರಗತಿಗೆ  ಶುಭ ಹಾರೈಸಿದರು. ಹಿರಿಯೂರು ಪಟ್ಟಣದಲ್ಲಿರುವ ಮಣಪುರಂ ಗೋಲ್ಡ್ ಕಂಪನಿ ಯ 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ  ಉದ್ಘಾಟಿಸಿ ಅವರು ಮಾತನಾಡಿದರು.  ಈ ಸಂದರ್ಭದಲ್ಲಿ ರೀಜಿನಲ್ ಮ್ಯಾನೇಜರ್ ರಾಮಾನಂದ್ ಸಿಂಗ್, ರೀಜಿನಲ್ ಆಡಿಟ್ ಹೆಡ್ ಅನುಭವ ಗುಪ್ತ, ಬ್ರಾಂಚ್ ಮ್ಯಾನೇಜರ್ ಪ್ರಸಿದ, ಏರಿಯಾ ಹೆಡ್ ಕಳಯರಾಜ್, ಮೈಕ್ರೋ ಹೋಂ ಲೋನ್ ಸೇಲ್ಸ್ ಆಫೀಸರ್  ಶಾಮಕುಮಾರ್,  ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ತಾಲ್ಲೂಕು ಎಸ್.ಟಿ ಘಟಕದ ಅಧ್ಯಕ್ಷರಾದ ಗಿರೀಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಮನೋಜ್, ಯುವ ಮುಖಂಡರಾದ ಭಾನು ಪಾಳೇಗಾರ, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.