ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ತಲುಪುವಂತಾಗಬೇಕು

ಕೋಲಾರ,ಜು,೨೭- ಸರ್ಕಾರದಿಂದ ಮಂಜೂರಾಗಿರುವ ಹಣವನ್ನು ಸಮರ್ಪಕವಾಗಿ ಸದ್ಬಳಿಸಿ ಕೊಳ್ಳಬೇಕು, ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು,
ಜಿಲ್ಲಾ ಪಂಚಾಯತ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಮಾದ್ಯಮದವರೊಂದಿಗೆ ಮಾತನಾಡುತ್ತಾ ಇಂದು ಬೆಳಿಗ್ಗೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಡಿಜಿಟಲ್ ನರ್‍ವ್ ಸೇಂಟರ್‌ಗೆ,ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ, ವೇಮಗಲ್ ಪ್ರಾಥಮಿಕ ಅರೋಗ್ಯ ಕೇಂದ್ರ, ಮೇಡಿಹಾಳ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಲಾಗಿತ್ತು, ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಿದೆ. ಕೆಲಸದ ಒತ್ತಡವು ಸಿಬ್ಬಂದಿಗಳ ಮೇಲೆ ಹೆಚ್ಚಾಗಿರುವುದು ಕಂಡು ಬಂದಿತು. ಈ ಆಸ್ಪತ್ರೆಗೆ ಅನುಕೊಲ ಮಾಡಿಕೊಡುವಂತ ಅವಶ್ಯಕತೆ ಇದೆ ಎಂದು ಹೇಳಿದರು,
ಮುಖ್ಯವಾಗಿ ಡಯಾಲಿಸಿಸ್ಸ್ ಯಂತ್ರಗಳು ಮತ್ತು ವಾರ್ಡ್ ವಿಸ್ತರಿಸ ಬೇಕಾಗಿರುವುದು ಸಿಬ್ಬಂದಿಗಳ ಕೊರತೆಯು ಇದೆ ಇದನ್ನು ತುಂಬುವುದಕ್ಕೆ ಹಾಗೂ ಡಯಾಲಿಸಿಸ್ಸ್ ಯಂತ್ರಗಳನ್ನು ಜಿಲ್ಲಾ ಕೇಂದ್ರಕ್ಕೆ ೧೦ ಹಾಗೂ ತಾಲ್ಲೂಕಿಗೆ ೨ ಯಂತ್ರಗಳ ಪೂರೈಕೆಗೆ ಏಜೆನ್ಸಿಗೆ ಟೆಂಡರ್ ನೀಡಲಾಗುವುದು. ಕೊರತೆ ಇರುವುದಕ್ಕೆ ಸ್ಥಳೀಯ ಶಾಸಕರು ಮತ್ತು ದಾನಿಗಳಿಂದ ಸಂಗ್ರಹ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ರೋಗಿಗಳು ಯಾರೇ ಬಂದರೂ ಸಹ ಔಷಧಿಗಳಿಲ್ಲ ಎಂದು ವಾಪಸ್ ಕಳುಹಿಸಬಾರದು ಹಾಗೂ ಹೊರಗಿನ ಔಷಧಿ ಅಂಗಡಿಗಳಿಗೆ ವೈದ್ಯರಿಂದ ಚೀಟಿಗಳು ಹೋಗದಂತೆ ಕ್ರಮವಹಿಸಿಲು ಹಾಗೂ ಔಷಧಿಗಳು ಇಲ್ಲವೆಂದರೆ ಸಾರ್ವಜನಿಕರಿಗೆ ನೀವೇ ಹೊರಗೆ ಖರೀದಿಸಿ ನೀಡ ಬೇಕೆಂದು ಅರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಖಾಲಿ ಇರುವಂತ ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ಮುಂದೆ ಪ್ರಸ್ತವನೆ ಇದ್ದು ಶೀಘ್ರದಲ್ಲೆ ಅನುಮತಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು,
ಗರ್ಭಿಣಿ, ಬಾಣಂತಿ ತಾಯಿ ಮಕ್ಕಳ ಆಸ್ಪತ್ರೆ ಅಭಿವೃದ್ದಿಗೆ ಕ್ರಮವಹಿಸಲಾಗುವುದು ವ್ಯಾಕ್ಸಿನ್ ಕಾರ್ಯಕ್ರಮಗಳು ಅಭಿವೃದ್ದಿ ಪಡೆಸಲು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ. ಅವರಿಗೆ ಸೂಚಿಸಲಾಗಿದೆ ಎಂದ ಅವರು ಸಾರ್ವಜನಿಕರಿಗೆ ಸಾಮಾನ್ಯವಾಗಿ ಅಧಿಕ ರಕ್ತದ ಒತ್ತಡ, ಮಧು ಮೇಹ ಕಾಯಿಲೆ ಮತ್ತು ಕ್ಯಾನ್ಸರ್‌ಗಳು ತಪಾಸಣೆಗೆ ಪೂರಕವಾದ ಈ ಕಾಯಲೆಗಳು ಬರುವ ಮುನ್ನವೆ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡ ಬೇಕಾಗಿದೆ. ಅದರೆ ಶೇ ೩೦ರಷ್ಟು ಮಾತ್ರ ತಪಾಸಣೆ ಅಗಿದೆ ಇದನ್ನು ಪೂರ್ಣವಾಗಿ ಮಾಡಲು ಜಿಲ್ಲೆಯಾದಾದ್ಯಂತ ಪ್ರತಿಯೊಬ್ಬರಿಗೂ ಸ್ಕ್ರೀನ್ ಟೆಸ್ಟ್ ಮಾಡ ಬೇಕಾಗಿದೆ ಎಂದು ಹೇಳಿದರು,