ಸಾರ್ವಜನಿಕರಿಗೆ ಸರಕಾರದ ಯೋಜನೆ ತಲುಪಿಸಲು ಕರೆ


ಧಾರವಾಡ, ಜೂ. 4: ಸರಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವದರೊಂದಿಗೆ ರಾಜ್ಯ ಸರಕಾರದ ಜನಕಲ್ಯಾಣ ಯೋಜನೆಗಳನ್ನು ಅರ್ಹರಿಗೆ, ಪ್ರಾಮಾಣಿಕವಾಗಿ ಮುಟ್ಟಿಸಬೇಕು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಗೃಹ ಕಚೇರಿಯಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕವು ನೀಡಿದ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ರಾಜ್ಯ ಸರಕಾರಿ ನೌಕರರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಅರ್ಹ ಫಲಾನಿಭವಿಗಳಿಗೆ ಸರಕಾರದ ಯೋಜನೆಗಳು ತಲುಪುತ್ತವೆ. ಸರಕಾರದ ಆಶಯದಂತೆ ಅಭಿವೃದ್ಧಿ ಸಾಧಿಸಲು ಸರಕಾರಿ ನೌಕರರ ಸಹಕಾರಬೇಕು ಎಂದು ಅವರು ಹೇಳಿದರು.
ರಾಜ್ಯ ಸರಕಾರವು, ಸರಕಾರಿ ನೌಕರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಅವರ ಬೇಡಿಕೆಗಳ ಕುರಿತು ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವುಗಳನ್ನು ಈಡೆರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಅವರು ತಿಳಿಸಿದರು.
ಅಖಿಲ ಕರ್ನಾಟಕ ಶಿಕ್ಷಕರ ಪೇಡರೇಷನ್ ದ ಕಾರ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಅವರು ಮಾತನಾಡಿ, ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಎನ್.ಪಿ.ಎಸ್. ರದ್ದತಿ ಆಗಬೇಕು. ಮತ್ತೇ ಓಪಿಎಸ್ ಜಾರಿಯಾಗಿಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸರಕಾರಿ ನೌಕರರನ್ನು ಬೆಂಬಲಿಸಿ, ಸಹಕರಿಸಬೇಕು ಎಂದು ತಿಳಿಸಿದರು.
ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ, ಜಿಲ್ಲೆಯ ಎಲ್ಲ ಸರಕಾರಿ ನೌಕರರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಬಹು ಮುಖ್ಯ ಬೇಡಿಕೆ ಎನ್.ಪಿ.ಎಸ್. ರದ್ದುಗೊಳಿಸವವರೆಗೆ ನಮ್ಮ ಹೋರಾಟ ನಿರಂತರವಾಗಿದ್ದು, ಇದರ ಪರಿಹಾರಕ್ಕೆ ಶಾಸಕರು ಬೆಂಬಲಿಸಬೇಕು ಎಂದರು.
ಜನಪ್ರತಿನಿಧಿಗಳು ಸಹಕಾರ ಮತ್ತು ವಿಶ್ವಾಸ ತೋರಿದಾಗ ಮಾತ್ರ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯ ಎಲ್ಲ ನೌಕರರು ಒಗ್ಗಟ್ಟಿನಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.
ಸಂಘದ ಜಿಲ್ಲಾ ಕಟ್ಟಡದ ಒಂದು ಭಾಗ ಶಿಥಿಲವಾಗಿದ್ದು, ಅಲ್ಲಿ ಹೊಸ ಕಟ್ಟಡ ನಿರ್ಮಿಸಲು ಮತ್ತು ಮಳಿಗೆ ನಿರ್ಮಿಸಲು ಶಾಸಕರು ಅನುದಾನ ನೀಡಬೇಕೆಂದು ಅವರು ವಿನಂತಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವ್ಹಿ.ಎಫ್.ಚುಳಕಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜಶೇಖರ ಎಂ.ಹೊನ್ನಪ್ಪನವರ ವಂದಿಸಿದರು.
ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಆರ್.ಪಿ.ಲಿಂಗದಾಳ, ಉಪಾಧ್ಯಕ್ಷ ರಾಜೇಶ ಕೋನರಡ್ಡಿ, ಖಜಾಂಚಿ ರಾಜಶೇಖರ ಬಾಣದ, ಜಂಟಿ ಕಾರ್ಯದರ್ಶಿ ಡಾ.ಸುರೇಶ ಹಿರೇಮಠ, ನೌಕರಭವನದ ಕಾರ್ಯದರ್ಶಿ ಗಿರೀಶ ಚೌಡಕಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವೈ.ಎಚ್.ಬಣವಿ, ಮಂಜುನಾಥ ಜಂಗ್ಲಿ,ಬಸವರಾಜ ಹೊಸಮನಿ, ಎನ್.ಎಸ್.ಕಮ್ಮಾರ,ಗೊಡೆಸವಾರ, ಬಸವರಾಜ ವಾಸನದ, ಮಾಜಿ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪುರಮಠ, ಎಡಿಎಲ್ ಆರ್ ಅನೀಲ ಜಾಲಗೇರಿ ಸೇರಿದಂತೆ ನೌಕರ ಸಂಘದ ಜಿಲ್ಲಾ ಪಧಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.