ಸಾರ್ವಜನಿಕರಿಗೆ ರಿಯಾಯಿತಿ ಮೂಲಕ ನಿವೇಶನ; ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು.ಸೆ.೧೨: ನಾವು ಪಟ್ಟಣದ ನಿವೇಶನ ಇಲ್ಲದ ಬಡ ಜನರಿಗೆ ಜಾಗ ಕೊಡಲು ಪ್ರಯತ್ನ ಪಟ್ಟರೂ, ಪಟ್ಟಣದ ಸುತ್ತ ಮುತ್ತ ಜಮೀನು ಸಿಗುವುದೇ ಕಷ್ಟ. ಇಂತಹ ಸಂರ‍್ಭದಲ್ಲಿ ಗಜಾನನ ಲೇಔಟ್ ಮಾಡಿ ಪೃಥ್ವಿ ಡೆವಲರ‍್ಸ್ ಸಂಸ್ಥೆಯ ಮಾಲೀಕರಾದ ಅಂಜಿನಪ್ಪನವರು ಗ್ರಾಹಕರಿಗೆ ರಿಯಾಯಿತಿ ಮೂಲಕ ಕಂತುಗಳ ಮೂಲಕ ನಿವೇಶನ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮಿಕಿ ಭವನದಲ್ಲಿ  ಪೃಥ್ವಿ ಡೆವಲರ‍್ಸ್, ಶ್ರೀಯಾಯಿಷ್ ಡೆವಲರ‍್ಸ್ ಸಂಯುಕ್ತಾಶ್ರಯದಲ್ಲಿ ನೂತನ ಗಜಾನನ ಲೇ-ಔಟ್ ನರ‍್ಮಾಣ ಕರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಿಂದುಳಿದ ಬರಪೀಡಿತ ಜಗಳೂರುನ ಜನರ ಹಿತಕ್ಕನುಗುಣವಾಗಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ಮೂಲಭೂತ ಸೌರ‍್ಯಗಳನ್ನು ಕಲ್ಪಿಸಿ ಲೇ-ಔಟ್‌ಗಳನ್ನು ನಿರ‍್ಮಿಸಿಕೊಡಬೇಕು. ಹಿಂದೆ ಪಟ್ಟಣದಲ್ಲಿ ನಿರ‍್ಮಿಸಿದ ಅನೇಕ ಬಡಾವಣೆಗಳು ಪೂರ್ಣಗೊಳ್ಳದೇ ನಿವೇಶನ ಪಡೆದ ಗ್ರಾಹಕರು ಪರಿತಪಿಸುತ್ತಿದ್ದಾರೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ಪೃಥ್ವಿ ಡೆವಲರ‍್ಸ್ ನವರು ಗಜಾನನ ಲೇ-ಔಟ್ ಮಾಡಿ ಶಿಕ್ಷಕರು, ನೌಕರರಿಗೆ ರಿಯಾತಿ ಧರದಲ್ಲಿ ಕಂತುಗಳ ಆಧಾರದ ಮೇಲೆ ಸೈಟು ಕೊಡುವ ಯೋಜನೆ ಒಳ್ಳೆಯ ಬೆಳವಣಿಗೆ. ಮನೆ ಕಟ್ಟುವ ಆಸೆ ಇದ್ದರೂ ನನಸಾಗುವುದು ಕಡಿಮೆ ಎಂದರು. ಭದ್ರಾಮೇಲ್ದಂಡೆನಯೋಜನೆ, 57 ಕೆರೆಗಳಿಗೆ ನೀರು ಬಂದರೆ. ನಮ್ಮ ತಾಲ್ಲುಕು ನೀರಾವರಿ ಪ್ರದೇಶವಾಗಿ ನಮ್ಮ ರೈತರು ರ‍್ಥಿಕ ಸಭಲರಾಗುತ್ತಾರೆ ಎಂದರು.ಪೃಥ್ವಿ ಡೆವಲರ‍್ಸ್ನ ಮಾಲೀಕ ಅಂಜಿನಪ್ಪ ಮಾತನಾಡಿ ಜಗಳೂರು ಗ್ರಾಮದವನಾದ ನಾನು ಕನಕಗಿರಿ, ಕುಷ್ಟಗಿ, ಗಜೇಂದ್ರಗಡ ಸೇರಿದಂತೆ ಅನೇಕ ಕಡೆ ಲೇ-ಔಟ್ ಮಾಡಿ ಸ್ಕೀಂ ಮೂಲಕವೇ ಗ್ರಾಹಕರಿಗೆ ಸೈಟ್ ವಿತರಿಸಿ ಯಶಸ್ವಿಯಾಗಿದ್ದೇವೆೆ. ಜಗಳೂರುನಲ್ಲೂ ನಾನು ಗಜಾನನ-ಲೇ ಔಟ್ ಬಡಾವಣೆ ನರ‍್ಮಿಸಿ, ಸಾಮಾನ್ಯ ಜನರಿಗೂ ನಿವೇಶನ ಕೊಡುವ ಸಂಕಲ್ಪ ಮಾಡಿದ್ದು, ಸ್ಕೀಂ ನಲ್ಲಿ ಲೋಪ ಆಗದಂತೆ ಗ್ರಾಹಕರಿಗೆ ನಿವೇಶನವನ್ನು ನೀಡಲಾಗುವುದೆಂದು ಭರವಸೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿ ವೇಮಣ್ಣರೆಡ್ಡಿ, ಮಾಜಿ ಜಿ.ಪಂ.ಸದಸ್ಯರಾದ ಕೆ.ಪಿ.ಪಾಲಯ್ಯ, ಬಿಜೆಪಿ ಮುಖಂಡ ಕಾನನಕಟ್ಟೆ ಪ್ರಭು ಸೇರಿದಂತೆ ಇತರರು ಮಾತನಾಡಿದರು. ಈ ಸಂರ‍್ಭದಲ್ಲಿ ಉದ್ದಿಮೆ ಶಾಮನೂರು ಅಂಜಿನಪ್ಪ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಶಿವಣ್ಣ, ಕಲ್ಲಹಳ್ಳಿ ಅಂಜಿನಪ್ಪ, ಡಿ.ವಿ ಗುರುಮರ‍್ತಿ, ಡಿಸಿಸಿ ಬ್ಯಾಂಕ್‌ನ ಹಾಲಸ್ವಾಮಿ, ಬ್ಲಾಕ್ ಕಾಂಗೈ ಅಧ್ಯಕ್ಷ ಷಂಶೀರ್ ಅಹಮ್ಮದ್, ಮಾಜಿ.ಜಿ.ಪಂ. ಸದಸ್ಯ ನಾಗರಾಜ್, ಪ.ಪಂ.ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ಪಾಪಲಿಂಗಪ್ಪ, ನವೀನ್‌ಕುಮಾರ್,ಕಲ್ಲೇಶ್‌ರಾಜ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.