ಸಾರ್ವಜನಿಕರಿಗೆ ಮಾಸ್ಕ್ ವಿತರಣೆ

ಗಂಗಾವತಿ ಮೇ 02: ಶಾಸಕ ಪರಣ್ಣ ಮುನವಳ್ಳಿ ಅವರ ಜನ್ಮದಿನದ ಸಾರ್ವಜನಿಕರಿಗೆ ಹತ್ತು ಸಾವಿರ ಮಾಸ್ಕ್ ವಿತರಿಸಲಾಯಿತು.
ಬಿಜೆಪಿ ನಗರ ಘಟಕ ಅಧ್ಯಕ್ಷ ಕಾಶೀನಾಥ ಚಿತ್ರಗಾರ ಮಾತನಾಡಿ, ಕರೋನ ಹಿನ್ನೆಲೆ ಶಾಸಕ ಪರಣ್ಣ ಮುನವಳ್ಳಿ ಅವರ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು. ದಯವಿಟ್ಟು ಮನೆಯಿಂದ ಹೊರಗಡೆ ಬಂದಾಗ ಮಾಸ್ಕ್ ಧರಿಸ ಬೇಕು. ಸ್ಯಾನಿಟೇಜರ್ ಬಳಸಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಪ್ರಾಧಿಕಾರ ಅಧ್ಯಕ್ಷ ಮಲ್ಲೇಶಪ್ಪ ಹೊಸಮನಿ, ಮಲ್ಲಿಕಾರ್ಜುನ ಗಡದ, ಅಕ್ಕಿ ಚಂದ್ರಶೇಖರ, ಸಂಗಯ್ಯಸ್ವಾಮಿ ಸಂಶಿಮಠ, ದೇವಪ್ಪ ಸಂಗಾಪೂರ ಇದ್ದರು.