ಸಾರ್ವಜನಿಕರಿಗೆ ಮಾಸ್ಕ್ ವಿತರಣೆ

ಲಿಂಗಸುಗೂರು.೦೪ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣದಲ್ಲಿ ನಡೆಯುತ್ತಿರುವ ಸಂತೆ ಯಲ್ಲಿ ಬಿದಿ ವ್ಯಾಪಾರಿಗಳ ಸಂಘದ ಮೂಲಕ ಹಾಗೂ ರಿಲಾಯನ್ಸ್ ಫೌಂಡೆಶನ್ ಸಹಕಾರದಿಂದ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಣೆ
ಮಾಡಲಾಯಿತು.ಬಿದಿ ವ್ಯಾಪಾರಿಗಳ ಸಂಘದ ಸಾಮಾಜಿಕ ಕಳಕಳಿ ಸಾರ್ವಜನಿಕರಿಗೆ ಉಚಿತವಾಗಿ ಈಗಾಗಲೇ ೩೦೦೦
ಸಾವಿರಕ್ಕೂ ಹೆಚ್ಚು ಮಾಸ್ಕ್ ವಿತರಣೆ ಮಾಡಿ. ಕರೋನಾ ೧೯ ನಿಯಮ ಪ್ರಕಾರ ಪ್ರತಿಯೊಂದು ವ್ಯಾಪಾರಿಗಳು ಸೋಂಕು ನಿಯಂತ್ರಣಕ್ಕೆ ಜನತೆ ಸೂಕ್ತಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮ್ಮೈಭೂಬಪಾಶ ಇವರು ಶನಿವಾರದಂದು ನಡೆದ ಸಂತೆ ಬಜಾರಿನಲ್ಲಿವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ಜಾಗೃತಿ ಮೂಡಿಸಿ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಬರುವ ೦೫ ವಾರ್ಡ್ ನಲ್ಲಿ ನಡೆಯುತ್ತಿರುವ ಸಂತೆ, ಸಂತಬಜಾರ ಪುರಸಭೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ ಕರೋನಾ ೧೯ ನಿಯಮ ಎರಡನೇ ಹಂತದ ಮಾಹಮಾರಿ ರೋಗ ಬಂದಾಗಿನಿಂದ ವ್ಯಾಪಾರಿಗಳಿಗೆ ಉಚಿತವಾಗಿ ಮಾಹಿತಿ ನೀಡುವಲ್ಲಿ ಪುರಸಭೆ ಅಧಿಕಾರಿಗಳು ಮುಖ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅದಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮೈಬೂಬಪಾಶ ಹೇಳಿದರು.
ಸಂತೆ ಬಜಾರ ಸುತ್ತ ಮುತ್ತ ನೂರಾರು ಮನೆಗಳು ಮಕ್ಕಳು ಹಾಗೂ ವಾರ್ಡ್ ಗಳ ನಿವಾಸಿಗಳು
ವಾಸಮಾಡುವ ಕೇಂದ್ರ ಬಿಂದುವಾಗಿದೆ ಇದರಿಂದ
ವಾರ್ಡ್‌ಗಳ ಜನರು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.ಕೂಡಲೇ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಪ್ರತಿ ವಾರವೂ ನಡೆಯುತ್ತಿರುವ ಶನಿವಾರದ ಸಂತೆ ಬಜಾರಿನಲ್ಲಿ ಕರೋನಾ ೧೯ ನಿಯಮ ಬಗ್ಗೆ ಜಾಗೃತಿ
ಮುಡಿಸಬೇಕು ಈ ವಾಡ ಸಂಪೂರ್ಣವಾಗಿ ಕೋಳಚೆ ಪ್ರದೇಶವಾಗಿದೆ ಪುರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ
ಹರಡುವುದು ಗ್ಯಾರಂಟಿ. ಕರೋನಾ ಮಾಹಮಾರಿ ರೋಗ ಹರಡದಂತೆ ತಡೆಯಲು ಪುರಸಭೆ ಕಾರ್ಯಾಲಯದಿಂದ ಪ್ರತಿ ವಾರವು ನಡೆಯುವ ಸಂತೆ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಕರೋನಾ ಮಾಹಮಾರಿ ರೋಗಗಳ ಬಗ್ಗೆ ಮಾಹಿತಿ ನೀಡಿ ಜಾಗ್ರುತಿ ಮುಂದೆ ಬರಬೇಕು ಎಂದು ಬಿದ ವ್ಯಾಪಾರಿಗಳ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ .
ಬಿದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಗೂ ರಿಲಾಯನ್ಸ್ ಫೌಂಡೆಶನ್
ಕಾರ್ಯಕರ್ತರಾದ ಜಗದೀಶ್ ಶರಣಪ್ಪ, ಅಮರೇಶ,
ಖಾಜಾಹುಸೇನ, ಅಲ್ಲಾವುದ್ದೀನ್, ಪಟೇಲ್, ಸೇರಿದಂತೆ ಇತರರು ಇದ್ದರು.