ಸಾರ್ವಜನಿಕರಿಗೆ ಮಾಸ್ಕ್ ಬಗ್ಗೆ ಅರಿವು

ಜಗಳೂರು.ಏ.೨೬;  ಜಗಳೂರು ಪೊಲೀಸ್ ಇಲಾಖೆ ವತಿಯಿಂದ ಇಂದು ಸಾರ್ವಜನಿಕರಿಗೆ ಮಾಸ್ಕ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಿಪಿಐ  ಮಂಜುನಾಥ್ ಪಂಡಿತ್ ಮತ್ತು ಪಿಎಸ್.ಐ ಸಂತೋಷ್ ಬಾಗೋಜಿ ಮುಖ್ಯ ಅಧಿಕಾರಿ ರಾಜು ಡಿ ಬಣಕಾರ್ ಅವರ ತಂಡದೊಂದಿಗೆ ಎಲ್ಲಾ ಸಾರ್ವಜನಿಕರಿಗೆ ಯಾರು ಮನೆಯಿಂದ ಅನವಶ್ಯಕವಾಗಿ ಹೊರಗೆ ಬರಬಾರದು ಹಾಗೇನಾದರೂ ಬಂದರೆ ಮುಖಕ್ಕೆ ಮಾಸ್ಕ್ ಹಾಕಬೇಕು ಸಾಮಾಜಿಕ ಅಂತರವನ್ನು ಕಾಪಾಡಬೇಕು  ಎಚ್ಚರಿಕೆಯನ್ನು  ಪೊಲೀಸ್ ಇಲಾಖೆಯ ಸರ್ಕಾರಿ ವಾಹನಗಳ ಮೂಲಕ ಮೈಕ್ನಲ್ಲಿ  ಜಾಗೃತಿ ಮೂಡಿಸಿದರು.ಅದರಂತೆ ಇಂದು ಪಟ್ಟಣದ ಜನತೆ ಪೊಲೀಸ್ ಪ್ರಕಟಣೆಯನ್ನು ಅರ್ಥಮಾಡಿಕೊಂಡು ಯಾರು ಅನವಶ್ಯಕವಾಗಿ ಬೀದಿಗಿಳಿದೆ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆಗಳಿಗೆ ತೆರಳುವುದು ಕಂಡುಬಂತು ಕೆಲ ಸಾರ್ವಜನಿಕರು  ಜಗಳೂರು ಪಟ್ಟಣದ ಬಾಲಕಿಯರ ಪ್ರಾಥಮಿಕ ಶಾಲಾ ಆವರಣದಲ್ಲಿ ದಿನನಿತ್ಯದ ಸಂತೆ ಸ್ಥಳಾಂತರ ಮಾಡಿ ಬೆಳಿಗ್ಗೆ 6.00 ಗಂಟೆಯಿಂದ ಸಾರ್ವಜನಿಕರಿಗೆ ದಿನನಿತ್ಯದ ವಸ್ತುಗಳಾದ ಪಟ್ಟಣ ತರಕಾರಿ ಹಾಲು ಹಣ್ಣು ಮತ್ತು ಆಸ್ಪತ್ರೆ. ಮೆಡಿಕಲ್ ಸ್ಟೋರ್. ಔಷಧಿ ತರಲು ಬರುತ್ತಿದ್ದರು ಸಾಮಾನ್ಯವಾಗಿತ್ತು.ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತ  ಹಳೇ ಬಸ್ ನಿಲ್ದಾಣ. ಎಸ್.ಬಿ. ಐ ಬ್ಯಾಂಕ್ ಮುಂಬಾಗ ಡಿಸಿಸಿ ಬ್ಯಾಂಕ್. ಮುಂಭಾಗ ಚಳ್ಳಕೆರೆ ಟೋಲ್ ರಸ್ತೆಯಲ್ಲಿ ಪೊಲೀಸ್ ಪ್ರಕಟಣೆಯನ್ನು ಅರ್ಥಮಾಡಿಕೊಂಡ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಮ್ಮ ಗ್ರಾಮಗಳಿಗೆ ತೆರಳಿದರು. ಜಗಳೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 
ದ್ವಿ ಚಕ್ರ ವಾಹನ ಸವಾರರು ಅನವಶ್ಯಕವಾಗಿ ಬೀದಿಗಿಳಿದು ಕಂಡುಬಂದರೆ ಅಂತ ವಾಹನಗಳ ವಿರುದ್ಧ ಮತ್ತು ಮುಖಕ್ಕೆ ಮಾಸ್ಕ್ ಹಾಕದೆ ಇರುವವರಿಗೆ ದಂಡ ಹಾಕಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದು ಕಂಡುಬಂತು ಒಂದು ಕಡೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಂಡ ಮತ್ತೊಂದು ಕಡೆ ತಾಲೂಕು ತಾಲೂಕು ದಂಡಾಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮತ್ತೊಂದು ಕಡೆ ಆರೋಗ್ಯ ಅಧಿಕಾರಿಗಳು ಮತ್ತು ತಂಡ ತಾಲೂಕು ಪಂಚಾಯಿತಿ ಇಲಾಖೆಗಳು ಬಹಳ ಜಾಗೃಕತೆ ಯಿಂದ  ಕೆಲಸ ನಿರ್ವಹಿಸಿ ಜನಸಾಮಾನ್ಯರಿಗೆ ಕೋವಿಡ್-19 ಎಂಬ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿರುವುದು ಸಾಮಾನ್ಯವಾಗಿತ್ತು 
ನಂತರ  ಉಪ ನಿರೀಕ್ಷಕರಾದ ಸಂತೋಷ್ ಬಾಗೂಜೀ ಮಾತ
ನಾಡಿ ಜನದಟ್ಟಣೆ ಪ್ರದೇಶದಲ್ಲಿ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಯಮ ಉಲ್ಲಂಘಿಸಿದವರಿಗೆ  250  ರೂಪಾಯಿಗಳನ್ನು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಧಾರ್ಮಿಕ ಉತ್ಸವಗಳು ಮತ್ತು ಜಾತ್ರೆ ಹಬ್ಬಗಳನ್ನು ಯಾರು ಮಾಡುವಂತಿಲ್ಲ ಮತ್ತು ಗುಂಪುಗಾರಿಕೆ ಸೇರುವಂತಿಲ್ಲ ಹಾಗೇನಾದರೂ ಮಾಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣವೇ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಹಿಂದಿನಿಂದಲೇ ತಾಲೂಕು ದಂಡಾಧಿಕಾರಿ. ತಾಲೂಕು ಆರೋಗ್ಯ ಅಧಿಕಾರಿ. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಜೊತೆಗೂಡಿ ಮುಖಕ್ಕೆ ಮಾಸ್ಕ್ ಸಾಮಾಜಿಕ ಅಂತರ ಕಾಪಾಡದೆ ಇರುವವರಿಗೆದಂಡ ಹಾಕಲಾಗುವುದು ಮತ್ತು ಪ್ರತಿದಿನ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳೊಂದಿಗೆ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು