ಸಾರ್ವಜನಿಕರಿಗೆ ಮಲೇರಿಯ ಕುರಿತು ಅರಿವು ಮೂಡಿಸಿ: ಡಾ.ರತಿಕಾಂತ ಸ್ವಾಮಿ

ಬೀದರ, ಜೂ.7:ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳು ಮಲೇರಿಯ ವಿರೋಧಿ ಮಸಾಚರಣೆಯ ಮೂಲಕ ಸಾರ್ವಜನಿಕರಲ್ಲಿ ಮಲೇರಿಯ ಕುರಿತು ಅರಿವು ಮೂಡಿಸಬೇಕು. ಆಸ್ಪತ್ರೆಗೆ ಬರುವ ಜ್ವರ ಪೀಡಿತ ರೋಗಿಗಳ ರಕ್ತ ಪರೀಕ್ಷೆ ಮಾಡಬೇಕು. ಪರೀಕ್ಷೆಯಲ್ಲಿ ಮಲೇರಿಯ ದೃಡಪಟ್ಟಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳಿದರು.

ಅವರು ಸೋಮವಾರ ನಗರದ 100-ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಬೀದರ ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಿದ ಮಲೇರಿಯ ವಿರೋಧಿ ಮಾಸಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸಾರ್ವಜನಿಕರಿಗೆ ಮಲೇರಿಯ ಕುರಿತು ಅರಿವು ಮೂಡಿಸಬೇಕು. ಜಿಲ್ಲೆಗೆ ಹೊರ ರಾಜ್ಯಗಳಿಂದ ಆಗಮಿಸುವವರ ಮೇಲೆಯು ನಿಗಾ ಇಡಬೇಕು ಇವರಲ್ಲಿ ಯಾರಿಗಾದರು ಮಲೇರಿಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ವದಗಿಸಬೇಕೆಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸಜೀವಕುಮಾರ ಮಾತನಾಡಿ ಜಿಲ್ಲೆಯಲ್ಲಿ ಮಲೇರಿಯ ಪ್ರಕರಣಗಳು ಇಳಿಮುಖವಾಗಿದ್ದು. ರಾಜ್ಯದಲ್ಲಿ 2025ರ ಹೊತ್ತಿಗೆ ಮಲೇರಿಯವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಶೂನ್ಯ ಮಲೇರಿಯ ಮಾಡುವ ಗುರಿ ಇದೆ ಎಂದು ಹೇಳಿದರು. ಮಲೇರಿಯ ನಿವಾರಣೆ ಮಾಡುವ ನಿಟ್ಟಿನಲ್ಲಿ ್ಲಅಗತ್ಯ ಎಲ್ಲಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು ತಮ್ಮ ಮನೆಯ ಸುತ್ತಮುತ್ತಲು ಕಲುಶಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಲೇರಿಯ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದರು. ಈ ಸಂದರ್ಭದಲ್ಲಿ ಡಾ.ಶಂಕರೆಪ್ಪಾ ಬೊಮ್ಮ, ಡಾ.ಶಿವಶಂಕರ ಬಿ, ಡಾ. ಕಿರಣ ಪಾಟೀಲ್, ಡಾ. ಮುಹ್ಮದ ಸೋಹೇಲ್ ಹುಸೇನ್, ಡಾ.ಸರೋಜ್ ಪಾಟೀಲ್, ಜೇತುಲಾಲ ಪವಾರ್, ಓಂಕಾರ ಮಲ್ಲಿಗೆ, ರಾಜು ಕುಲಕರ್ಣಿ, ಬಸವರಾಜ ಮೋದಿ, ರಾಜಶೇಖ ತಂಬಾಕೆ, ಮೌನದಾಸ, ರಫೀ, ಕಾಶಿನಾಥ, ಅನೀತಾ, ವೀರಶೆಟ್ಟಿ, ಏಸುದಾಸ ಥೋರೆ, ಸಂಗಶಟ್ಟಿ ಬಿರಾದರ, ಬಸವರಾಜ, ಸಮಿಯೋದ್ದಿನ್, ಹಾದಿ ತಬ್ರೇಜ್,ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, 100-ಹಾಸಿಗೆಗಳ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.