ಸಾರ್ವಜನಿಕರಿಗೆ ಪೊಲೀಸ್ ಕಿರುಕುಳ:ಆರೋಪ

ಚಿಂಚೋಳಿ,ಜೂ 25:ತಾಲೂಕಿನಲ್ಲಿ ವಿನಾಕಾರಣ ಪೊಲೀಸರು ಸಾರ್ವಜನಿಕರ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿದ್ದು,ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಕಾರ್ಯ ನಡೆದಿದೆ. ಎಂದು ತಾಲೂಕು ಬಿಜೆಪಿ ಮಾಧ್ಯಮ ವಕ್ತಾರ ಶ್ರೀಮಂತ ಕಟ್ಟಿಮನಿ ಅವರು ಆರೋಪಿಸಿದ್ದಾರೆ.
ಪೊಲೀಸರು ಕಾನೂನುಬಾಹಿರ ಚಟುವಟಿಕೆ ಮಾಡುವವರ ಬೆನ್ನಿಗೆ ನಿಂತಿರುವದು ಎಲ್ಲರಿಗೂ ಗೊತ್ತಿರುವ ವಿಷಯ.ಆದರೆ ವಿನಾ ಕಾರಣ ಜನರನ್ನು ಹಿಂಸಿಸುವದು ಖಂಡನೀಯ.ಜನ ಭೀತಿಯಲ್ಲಿ ಬದುಕುತ್ತಿದ್ದಾರೆ.ಇದು ಹೀಗೆ ಮುಂದುವರೆದರೆ ಬಿಜೆಪಿ ಕಾರ್ಯಕರ್ತರು ಠಾಣೆಗಳ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.