
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.05 ಹೋಳಿ ಹಬ್ಬ ಆಚರಣೆಯ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಹಾಗೂ ಅಹಿತಕರ ಘಟನೆ ನಡೆಯ ಕೂಡದು ಎಂದು ಕೂಡ್ಲಿಗಿಯ ಡಿವೈಎಸ್ಪಿ ಮಲ್ಲಪ್ಪ ವಿ ಮಲ್ಲಾಪುರ ಹೇಳಿದರು
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಹೋಳಿ ಹಬ್ಬದ ಆಚರಣೆಯ ಶಾಂತಿಯ ಸರಿ ಉದ್ದೇಶಿಸಿ ಮಾತನಾಡಿ ನಮ್ಮ ದೇಶದಲ್ಲಿ ಹೋಳಿಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿಯೂ ಕೂಡಾ ಹೋಳಿ ಹಬ್ಬವನ್ನು ಶಾಂತಿಯಿಂದ ಆಚರಿಸುವ ಮೂಲಕ ನಾಡಿಗೆ ಒಳ್ಳೆಯ ಸಂದೇಶ ಹೋಗಬೇಕು ಎಂದರು.
ಸಿಪಿಐ ಮಂಜಣ್ಣ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಕೆಮಿಕಲ್ ರಹಿತ ಬಣ್ಣವನ್ನು ಬಳಸುವ ಮೂಲಕ ದೇಹಕ್ಕೆ ದುಷ್ಪರಿಣಾಮ ಬೀರದಂತೆ ಬಣ್ಣವನ್ನು ಎರಚಿ ಯಾವುದೇ ಅಹಿತಕರ ಘಟನೆ ನಡೆಯಕೂಡದು ಎಂದರು.
ಈ ಸಂದರ್ಭದಲ್ಲಿ ಹುಳ್ಳಿ ಪ್ರಕಾಶ್, ಕನ್ನಳ್ಳಿ ಚಂದ್ರು, ಅಜಿಜುಲ್ಲಾ, ವಕೀಲ ಚಂದ್ರು, ಶಿವಶಂಕರಯ್ಯ ಮುಂತಾದವರು ಮಾತನಾಡಿದರು
ಪಿಎಸ್ಐ ಗಂಗಪ್ಪ ಅಧ್ಯಕ್ಷತೆ ವಹಿಸಿದ್ದರು.