ಸಾರ್ವಜನಿಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಸಂಚಾರ ಕಾನೂನು ಅರಿವು ಕಾರ್ಯಕ್ರಮ

ಕಲಬುರಗಿ: ನ.3:ನಗರದ ಕೇಂದ್ರ ಬಸ್ಸ್ ನಿಲ್ದಾಣದ ಚಾಲಕರಿಗೆ ಹಾಗೂ ಆರ್ ಜೆ ಪಿಯು ಕಾಲೇಜಿನ ಮಕ್ಕಳಿಗೆ, ಸಾರ್ವಜನಿಕರಿಗೆ ನಗರ ಸಚಾರ ಉಪ ವಿಭಾಗ ಪೊಲೀಸ್ ಠಾಣೆ-01 ವತಿಯಿಂದ ಸಂಚಾರ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಂಚಾರ ಉಪ ವಿಭಾಗ ಪೊಲೀಸ್ ಠಾಣೆ ಪಿಐ ಶಾಂತಿನಾಥ ಬಿ.ಪಿ ಇವರು ಮಾತನಾಡುತ್ತಾ ಸಾರ್ವಜನಿಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಹಾಗೂ ಹೇಗೆ ರಸ್ತೆ ಅಫಘಾತಗಳ ತಡೆಗಟ್ಟುವದು, ವಾಹನ ಚಲಾಹಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹಾಗೂ ದ್ವಿ ಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಪ್ರಾಣಾಪಾಯದಿಂದ ಪಾರಾಗುವ, ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವ ಬಗ್ಗೆ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು, ಒಂದು ವೇಳೆ ಮೊಬೈಲ್ ಬಳಸಿದರೆ ಆಗುವ ಅನಾಹುತಗಳ ಕುರಿತು ಕುಲಂಕುಶವಾಗಿದೆ ಎಂದು ಹೇಳಿದರು.
ಅತಿವೇಗ ಚಲಿಸುವುದರಿಂದ ಆಗುವ ಅಪಾಯ ಹಾಗೂ ಅವಸರವೇ ಅಪಘಾತಕ್ಕೆ ಕಾರಣವೆಂದು ಅರಿವು ಮೂಡಿಸುತ್ತ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ತಿಳುವಳಿಕೆ ಹೇಳಿದರು.
ಈ ಸಂದರ್ಭದಲ್ಲಿ ಸಂಚಾರ ಉಪ ವಿಭಾಗ ಪೊಲೀಸ್ ಠಾಣೆ-01ರ ಪಿಐ ಶ್ರೀಶೈಲಮ್ಮ ಪಾಟೀಲ, ಸಿಬ್ಬಂದಿಗಳಾದ ನರಸಿಂಹಚಾರಿ, ಶಶಿಕಾಂತ ಪಾಟೀಲ್, ಸಿದ್ದು ಬಿರಾದಾರ ಹಾಗೂ ಆರ್ ಜೆ ಪಿಯು ಕಾಲೇಜಿನ ಪ್ರಚಾರ್ಯರು ಹಾಗೂ ಮಕ್ಕಳು ಇದ್ದರು.