ಸಾರ್ವಜನಿಕರಿಗೆ ಕೋವಿಡ್ ಜಾಗೃತಿ- ಮಾಸ್ಕ್ ವಿತರಣೆ

ಹಿರಿಯೂರು: ಜ 12- ಇಲ್ಲಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯೂತ್ ರೆಡ್ ಕ್ರಾಸ್  ಹಾಗೂ ಎನ್ ಎಸ್ ಎಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಿರಿಯೂರು ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರ ಚಿತ್ರದುರ್ಗ,  ಸಾರ್ವಜನಿಕ ಆಸ್ಪತ್ರೆ ಹಿರಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಜಾಗೃತಿ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಶಿಕಲಾ ರವಿಶಂಕರ್  ಉದ್ಘಾಟಿಸಿದರು.  ಅವರು ರಕ್ತದಾನವನ್ನ ಮಾಡುವುದರಿಂದ ನಾಲ್ಕು ಜೀವಗಳಿಗೆ ಜೀವದಾನ ಮಾಡಿದಂತೆ  ಹಾಗೆಯೇ ವೈಯಕ್ತಿಕವಾಗಿ   ಅತ್ಯುತ್ತಮ ಆರೋಗ್ಯ ವನ್ನು ಹೊಂದುತ್ತೇವೆ  ಹಾಗೂ ರಕ್ತದಾನ ಶ್ರೇಷ್ಠದಾನ ಎಂದು ಹೇಳಿದರು.ಜಿಲ್ಲಾ  ರಕ್ತ ನಿಧಿ ಕೇಂದ್ರದ  ಪೆತಾಲಜಿಸ್ಟ್  ಫಾತಿಮಾ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳು ಮತ್ತು ರಕ್ತದಾನ ಮಾಡಲಿಕ್ಕೆ ಅರ್ಹತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಡಿ ಆರ್ ಹನುಮಂತರಾಯ ಮಾತನಾಡಿ ರಕ್ತದಾನ ಮಾಡುವಂತ ಮಹಾನ್ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿ ವಿನಂತಿಸಿದರು.ಈ ಕಾರ್ಯಕ್ರಮದ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಪ್ರೊ. ಬಿ.ಕೆ ನಾಗಣ್ಣ,ಸಣ್ಣ ಭೀಮಣ್ಣ, ಮಹಾಬಲೇಶ್ವರ ಶೆಟ್ಟಿ, ಆನಂದ ಶೆಟ್ಟಿ, ಇಸ್ಮಾಯಿಲ್ ಜಬಿವುಲ್ಲಾ ದೇವರಾಜ್ ಮೂರ್ತಿಸತೀಶ್ ಬಾಬು ಮತ್ತಿತರರು ಭಾಗವಹಿಸಿದ್ದರು.ಕಾಲೇಜಿನ ಅಧ್ಯಾಪಕರಾದ ಪರಮೇಶ್ ಎಸ್ ಓ,  ಡಾ.ನಟರಾಜ್,  ಚೈತ್ರ ,  ಪ್ರಸಾದ್ ಶ್ವೇತ ಟಿ.ಎಮ್   ಉಪನ್ಯಾಸಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಡಾ. ಧನಂಜಯ್ ಸ್ವಾಗತಿಸಿದರು ಉಪನ್ಯಾಸಕ ಪುಟ್ಟರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಸನ್ನಕುಮಾರ್ ಡಿ.ಆರ್ ವಂದಿಸಿದರು. ರೆಡ್ ಕ್ರಾಸ್ ಸಂಸ್ಥೆಯಿಂದ 800 ಮಾಸ್ಕ್ ಗಳನ್ನು  ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ 41 ಯೂನಿಟ್ ರಕ್ತವನ್ನು  ಸಂಗ್ರಹಿಸಲಾಯಿತು.