ಸಾರ್ವಜನಿಕರಿಗೆ ಎಪಿಎಂಸಿ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್‌

ಬಳ್ಳಾರಿ, ಏ.17: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಎಪಿಎಂಸಿ ಆವರಣದಲ್ಲಿರುವ ಉಚಿತ ಆಸ್ಪತ್ರೆಯಲ್ಲಿ ಎರಡನೇ ದಿನವಾದ ಇಂದು ಸಹ ಸಾರ್ವಜನಿಕರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಮುಂದುವರಿಸಲಾಗಿತ್ತು.
ನಿನ್ನೆ ದಿನ
ಎಪಿಎಂಸಿ ಆವರಣದ ವರ್ತಕರು ವ್ಯಾಪಾರಸ್ಥರು ರೈತರು ಕೂಲಿ ಕಾರ್ಮಿಕರು ಸೇರಿದಂತೆ ನಿನ್ನೆವ103 ಜನರಿಗೆ, ಇಂದು 101 ಜನರಿಗೆ ಲಸಿಕಾ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ಸಹಕಾರ ನೀಡಿದರು.