ಸಾರ್ವಜನಿಕರಲ್ಲಿ ಮತದಾನ ಜಾಗ್ರತಿ ಕಾರ್ಯಕ್ರಮ

ಇಂಡಿ:ಮೇ.4: ನಗರದ ಪ್ರಮುಖ ಬಿದಿಗಳಲ್ಲಿ ಹಾಗೂ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮತದಾನ ಜಾಗ್ರತಿ ಅರಿವು ಕಾರ್ಯಕ್ರಮ ಮೂಡಿಸಿದರು. ಸಹಾಯಕ ಚುನಾವಣೆ ಅಧಿಕಾರಿ ಹಾಗೂ ಕಂದಾಯ ಉಪ ವಿಭಾಗ ಅಧಿಕಾರಿ ಅಭಿದ್ ಗದ್ಯಾಳ್ ಮಾತನಾಡಿ ಮತದಾರರು ಯಾವುದೆ ರೀತಿ ಆಶೆ ಆಮಿಷಕ್ಕೆ ಒಳಗಾಗದೆ ಅಥವಾ ಯಾವುದೆ ಜಾತಿ, ಧರ್ಮ, ಮತ, ಪಂಥ್ ಗಳಿಗೆ ಮಾರು ಹೋಗದೆ ಮತದಾನ ಮಾಡಬೇಕು ಎಂದು ಅವರು ತಿಳಿವಳಿಕೆ ನೀಡಿದರು. ಯಾವ ಕಾರಣಕ್ಕೂ ಮತದಾನ ದಿಂದ ವಂಚತಾಗಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಹಾಗೂ ಕಂದಾಯ ಉಪ ವಿಭಾಗ ಅಧಿಕಾರಿ ಅಭಿದ್ ಗದ್ಯಾಳ್, ತಹಶೀಲ್ದಾರ್ ಮಂಜುಳಾ ನಾಯಕ, ಸ್ವಿಪ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಿ ನೀಲಗಂಗಾ ಬಬಲಾದ, ಸಹಾಯಕ ನಿರ್ದೇಶಕರು ಸಂಜಯ ಖಡಗೇಕರ್, ಡಿ ವೈ ಎಸ್ ಪಿ ಜಗದೇಶ್, ತಾಲೂಕ ಅಧಿಕಾರಿಗಳು, ತಾಲೂಕ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಪಂಚಾಯತ್ ಸಿಬ್ಬಂದಿಗಳು, ತಾಲೂಕ ಆಯ್ ಇ ಸಿ ಸಂಯೋಜಕರು ರಾಮನಗೌಡ, ಹಾಗೂ ಸಿಬ್ಬಂದಿಗಳು, ಚುನಾವಣೆ ರಾಯಭಾರಿ ರಾಜೇಶ್ ಪವರ್ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.