ಸಾರ್ವಜನಿಕರನ್ನು ಅಲೆದಾಡಿಸದೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು‌ ಸೂಚನೆ

ಜಗಳೂರು.ಜೂ.೧೭; ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸದೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಲೋಕಾಯುಕ್ತ ಎಸ್.ಪಿ ಎಂ.ಎಸ್.ಕೌಲಾಪುರೆ ಸೂಚಿಸಿದರು.ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಲೊಕೊಪಯೋಗಿ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ.ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ತಾಲೂಕಿನ ಭೇಟಿ ನೀಡಿ ಕೊಠಡಿಗಳ ದುರಸ್ಥಿ ಸುಸ್ಥಿತಿಗಳ ಬಗ್ಗೆ ಬಿಸಿಯೂಟದ ಗುಣಾತ್ಮಕತೆಯನ್ನು ಪರಿಶೀಲಿಸಿ ಎಂದರು.ಸಿಡಿಪಿಓ ಇಲಾಖೆಯ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ಪಾಕೇಟ್ ಗಳನ್ನು ತೆರೆದು ಎಷ್ಟು ದಿನಗಳವರೆಗೆ ಬಳಕೆಮಾಡ ಬಹುದು ಎಂಬುದನ್ನು ಚೆಕ್ ಮಾಡಿ ವರದಿ ಸಲ್ಲಿಸಲು  ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರ ವಿವಿಧ ಪಿಂಚಣಿ ಸರ್ಕಾರದ ಯೋಜನೆಯಡಿ ಅರ್ಹಫಲಾ ನುಭವಿಗಳಿಗೆ ಹಾಗೂ ಸರಕಾರದ ಯೋಜನೆಗಳನ್ನು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಿಸಬೇಕು.ಸಕಾಲದಲ್ಲಿ ಅರ್ಜಿ ಗಳ ಕಡತಗಳನ್ನು ವಿನಾಕಾರಣ ವಿಳಂಬ ಮಾಡದೆೆ ವಿಲೆವಾರಿ ಮಾಡಿ ಸರಕಾರದ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಲು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು‌ ಎಂದು ಸಲಹೆ ನೀಡಿದರು.ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಸಮಸ್ಯೆ ಪರಿಹರಿಸಿ:- ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಬಿಲ್ ಪಾವತಿಸಬೇಕು ಎಂದರು. ಪಟ್ಟಣದ ಮಹತ್ವಾಕಾಂಕ್ಷಿ ಹಲವು ವರ್ಷಗಳಿಂದ ಶಾಂತಿ ಸಾಗರ ದ ಕುಡಿಯುವ ನಿರ್ವಹಣೆಯಲ್ಲಿ ವಿಫಲರಾಗಿದ್ದು ಶೀಘ್ರದಲ್ಲಿ ಕ್ರಮ ಕೈಗೊಳ್ಳುಂತೆ ಅಲ್ಲದೆ ಪಟ್ಟದ ಆರ್ ಓ ಘಟಕಗಳನ್ನು ದುರಸ್ಥಿಗೊಳಿ ಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳು ಪ್ರತಿ ಸಭೆಗೆ ಗೈರಾಗುತ್ತಿರುವುದು ಮೇಲ್ನೋಟಕ್ಕೆ ಬೇಜವಾಬ್ದಾರಿತನ ಎಂದು ಕಾಣುತ್ತಿದೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡಬೇಕು ಸಾರ್ವಜನಿಕರು ಈ ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳು ತ್ತೇನೆ ಎಂದರು ಅದೇ ರೀತಿ ಉಳಿದಂತೆ ವಿಧದ ಇಲಾಖೆಯ  ಅಧಿ ಕಾರಿಗಳು ಎಚ್ಚೆತ್ತುಕೊಳ್ಳಬೇಕು  ಸೇರಿಂದತೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಕಡ್ಡಯವಾಗಿ ಹಾಜರಿರ ಬೇಕು.ಅಧಿ ಕಾರಿಗಳು ನಿರ್ಲಕಷ್ಯ ಸಲ್ಲದು ವಿನಾಕಾರಣ ಉಡಾಫೆ ಉದಾಹರ ಣೆ ಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ತಾ. ಪಂ.ಇಓ ಚಂದ್ರಶೇಖರ್, ಲೋಕಾಯುಕ್ತ ಇಲಾಖೆಯ ಡಿವೈಎಸ್ ಪಿ ರಾಮಕೃಷ್ಣ,ವೃತ್ತ ಪೊಲೀಸ್ ಇನ್ಸ್ಪೆಕ್ಟರ್,ಪ್ರಭುಸೂರಿನ,ಪೊಲೀಸ್ ಲಿಂಗರಾಜ್,ಸೇರಿದಂತೆ ಅಧಿಕಾರಿಗಳು ಇದ್ದರು.