ಸಾರ್ಥಕ ಸೇವೆ ಸಲ್ಲಿಸಿದ ಶರಣಪ್ಪ ತೆಗ್ಗೆಳ್ಳಿ ಸೇವಾ ನಿವೃತ್ತಿ: ಸನ್ಮಾನ

ವಿಜಯಪುರ, 06-ಸಮಗ್ರ 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಅಧಿಕಾರಿಗಳ, ಸಿಬ್ಬಂದಿಯ ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದ ಶರಣಪ್ಪ ಎಸ್. ತೆಗ್ಗೆಳ್ಳಿ ಅವರು ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಸಂದರ್ಭದಲ್ಲಿ ಅವರನ್ನು ಹೃದಯಸ್ಪರ್ಶಿಯಾಗಿ ಬಿ.ಎಸ್.ಎನ್.ಎಲ್. ದೂರವಾಣಿ ಕೇಂದ್ರದಲ್ಲಿ ಜರುಗಿದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಂ.ಆರ್.ಉಸ್ತಾದ್, ಡಿ.ಜಿ.ಎಂ. ಅವರು ವಹಿಸಿ ಮಾತನಾಡುತ್ತ ತೆಗ್ಗೆಳ್ಳಿ ಅವರ ಗುಣಗಾನ ಮಾಡಿದರು. ವೇದಿಕೆಯ ಮೇಲೆ ಅಧಿಕಾರಿಗಳಾದ ವಿ.ಡಿ.ನಾಯಕ, ಎಸ್.ಎಂ.ರಾಠೋಡ, ಎಂ.ಎಸ್.ಚಿಂಚಖಂಡಿ, ಬಿರಾದಾರ ಮೊದಲಾದವರು ವೇದಿಕೆಯ ಮೇಲಿದ್ದರು. ಶರಣಪ್ಪ ತೆಗ್ಗೆಳ್ಳಿಯವರನ್ನು ಕುರಿತು ರಾಜಶೇಖರ ಕಲ್ಮಠ, ಎಸ್.ಎಲ್.ಕುಲಕರ್ಣಿ, ವಿ.ವಾಯ್.ಬಿರಾದಾರ ಮುಂತಾದವರು ಮೆಚ್ಚುಗೆಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾ ಸಂಘದ ಅಧ್ಯಕ್ಷರಾದ ಬಾಬುರಾವ ಕುಲಕರ್ಣಿ ಅವರು ಶ್ರೀಯುತರಿಗೆ ಕಾಣಿಕೆ ನೀಡಿ ಶುಭ ಹಾರೈಸಿದರು. ಪ್ರಾರಂಭದಲ್ಲಿ ಶ್ರೀಮತಿ ಸುನಂದಾ ಪತ್ತಾರ ಅವರು ಪ್ರಾರ್ಥನಾ ಗೀತೆ ಹಾಡಿದರು. ಚಿದಾನಂದ ದಡ್ಡಿ ಅವರು ವಂದನಾರ್ಪಣೆ ಮಾಡಿದರು. ಸುನೀಲ ಮುಂಡೇವಾಡಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.